ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಹರ್ಷ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಬ್ರಹ್ಮಗಂಟು ಸೀರಿಯಲ್ನಲ್ಲಿ ಶೋಭಿತಾ ಪತಿಯ ಪಾತ್ರದಲ್ಲಿ ನಟಿಸಿದ್ದ ಹರ್ಷ ಗೌಡ ಮಾತನಾಡಿ, ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ನಿನ್ನೆ (ಡಿ.1) ಮಧ್ಯಾಹ್ನ ನನಗೆ ಸ್ನೇಹಿತನಿಂದ ಶೋಭಿತಾ ಸೂಸೈಡ್ ವಿಚಾರ ಗೊತ್ತಾಯ್ತು. ಅವರು ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ.
ನಾಲ್ಕೈದು ವರ್ಷ ನಾವು ಎರಡು ಸೀರಿಯಲ್ನಲ್ಲಿ ಒಟ್ಟಾಗಿ ನಟಿಸಿದ್ದೇವೆ. ಈ ಜರ್ನಿಯಲ್ಲಿ ಅವರು ಬಹಳ ಕಷ್ಟಪಟ್ಟು ಬಂದಿದ್ದರು. ಕೆಲವೊಮ್ಮೆ ಸಾಕಾಗಿದೆ, ಕೆಲಸ ಬಿಟ್ಟು ಬಿಡ್ತೀನಿ ಅಂತಾನೂ ಹೇಳುತ್ತಿದ್ದರು. ಮದುವೆಯ ಬಳಿಕ ನಟನೆ ಬಿಟ್ಟರು. ಆಗ ಕರೆ ಮಾಡಿ ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದರು.
Kitchen Hacks: ಚಳಿಗಾಲದಲ್ಲಿ ಮೊಸರು ಸರಿಯಾಗಿ ಆಗುತ್ತಿಲ್ವಾ..? ಚಿಂತೆ ಬಿಡಿ, ಈ ಟಿಪ್ಸ್ ಪಾಲಿಸಿ
ನಂತರ ಯಾವಾಗಲಾದರೂ ಅಪರೂಪಕ್ಕೆ ವಿಶೇಷ ದಿನಕ್ಕೆ ಮೆಸೇಜ್ ಮಾಡಿ ಶುಭ ಕೋರುತ್ತಿದ್ದರು ಎಂದರು. ನಿನ್ನೆ ಈ ವಿಚಾರ ಕೇಳಿ ಶಾಕ್ ಆಯ್ತು. ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗಬೇಕಿದೆ. ಈ ರೀತಿ ನಿರ್ಧಾರ ಯಾರು ಮಾಡಬಾರದು. ಏನೇ ಇದ್ದರು ಎದುರಿಸಬಹುದಾಗಿತ್ತು ಎಂದು ಶೋಭಿತಾ ಸೂಸೈಡ್ ಬಗ್ಗೆ ಹರ್ಷ ಮಾತನಾಡಿದ್ದಾರೆ. ಸಹನಟಿಯ ಆತ್ಮಹತ್ಯೆಗೆ ನಟ ಭಾವುಕರಾಗಿದ್ದಾರೆ. ಸದ್ಯ ಹೈದರಾಬಾದ್ನಲ್ಲಿ ಶೋಭಿತಾ ಮೃತದೇಹ ಇದೆ. ಈಗಾಗಲೇ ಮರಣೋತ್ತರ ಪರೀಕ್ಷೆ ಕೂಡ ಆಗಿದೆ. ಆ ಬಳಿಕ ಬೆಂಗಳೂರಿಗೆ ಮೃತದೇಹ ಸ್ಥಾಳಾಂತರಗೊಳ್ಳುವ ಸಾಧ್ಯತೆ ಇದೆ.