ನಟಿ ಶೋಭಿತಾ ಶಿವಣ್ಣ ಅವರು ಇತ್ತೀಚೆಗೆ ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಮದುವೆ ಆಗಿ ಇನ್ನೂ ಎರಡು ವರ್ಷ ತುಂಬಿತ್ತಷ್ಟೇ. ಆಗಲೇ ಜೀವನ ಕೊನೆ ಮಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ನ ಗಚ್ಚಿಬೌಲಿ ಪೊಲೀಸರು ತನಿಖೆ ನಡೆಸಿದ್ದಾರೆ.
ಕಡಲೆಕಾಯಿ ಪರಿಷೆಯಿಂದ ಖುಷಿಯಲ್ಲಿದ್ದ ಸಿಟಿ ಮಂದಿಗೆ ಶಾಕ್: ಕಮಿಷನರ್ ಮೊರೆ ಹೋದ ಬಸವನಗುಡಿ ನಿವಾಸಿಗಳು! ಕಾರಣ?
ಬ್ರಹ್ಮಗಂಟು ಧಾರವಾಹಿ ಮೂಲಕ ಜನಮನ್ನಣೆಗಳಿಸಿದ್ದ ಖ್ಯಾತ ನಟಿ ಶೋಭಿತಾ ಶಿವಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ.
ಕಳೆದ 2 ವರ್ಷಗಳ ಹಿಂದೆ ಮದುವೆ ಆಗಿ ಹೈದರಾಬಾದ್ ನಲ್ಲಿ ಸೆಟಲ್ ಆಗಿದ್ದ ನಟಿ ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ, ಸಾವಿನ ಕಾರಣ ಬೇರೆ ಇರಬಹುದು ಎಂದು ನಟಿಯ ಆಪ್ತ ಬಳಗ ಅನುಮಾನ ವ್ಯಕ್ತಪಡಿಸಿತ್ತು.
ಇದೀಗ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವೈದ್ಯರು ಸಾವಿನ ಅಸಲಿ ವಿಷಯ ಬಿಚ್ಚಿಟ್ಟಿದ್ದಾರೆ. ಆತ್ಮಹತ್ಯೆಯಿಂದಲೇ ಶೋಭಿತಾ ನಿಧರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಶೋಭಿತಾ ಅವರು ಮದುವೆ ಆದ ಬಳಿಕ ಹೈದರಾಬಾದ್ನಲ್ಲಿ ಪತಿಯ ಜೊತೆ ನೆಲೆಸಿದ್ದರು. ಅಪಾರ್ಟ್ಮೆಂಟ್ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಯಾರಾದರೂ ನಟಿಯನ್ನು ಹತ್ಯೆ ಮಾಡಿರಬಹುದೇ ಎಂಬ ಪ್ರಶ್ನೆ ಕೂಡ ಉದ್ಭವ ಆಗಿತ್ತು. ಆದರೆ ಶೋಭಿತಾ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಾಣಿಸಿಲ್ಲ. ಹಾಗಾಗಿ ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂಬುದು ಖಚಿತವಾಗಿದೆ.
ಶೋಭಿತಾ ಸಾವಿನ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿದ್ದಾರೆ. ಶೋಭಿತಾ ಬರೆದಿದ್ದರು ಎನ್ನಲಾದ ಸೂಸೈಡ್ ನೋಟ್ ಕೂಡ ಲಭ್ಯವಾಗಿದೆ. ‘ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು’ ಎಂದು ಇದರಲ್ಲಿ ಬರೆಯಲಾಗಿದೆ. ಅಲ್ಲದೇ, ‘ಜೀವನದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿದೆ’ ಎಂದು ಸಹ ಬರೆಯಲಾಗಿದ್ದು, ಈ ಸಾಲುಗಳ ಅರ್ಥ ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ನಟಿಯ ಆತ್ಮಹತ್ಯೆ ಸಂಬಂಧಿಸಿದಂತೆ ನೆರೆಹೊರೆಯವರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಶೋಭಿತಾ ಅವರ ಸಂಸಾರದಲ್ಲಿ ಏನಾದರೂ ಬಿರುಕು ಮೂಡಿತ್ತಾ ಎಂಬುದನ್ನು ಕೂಡ ಪತ್ತೆ ಹಚ್ಚಲಾಗುತ್ತಿದೆ.