ಕಿರುತೆರೆಯಲ್ಲಿ ಹಾವಳಿ ಮಾಡಿದ ಮೇಲೆ ಸ್ಯಾಂಡಲ್ವುಡ್ನಲ್ಲಿ (Sandalwood) ಮೋಡಿ ಮಾಡುತ್ತಿರುವ ಶರಣ್ಯ ಶೆಟ್ಟಿ (Sharanya Shetty) ಸದಾ ಒಂದಲ್ಲಾ ಒಂದು ಫೋಟೋಶೂಟ್ನಿಂದ ಸಂಚಲನ ಸೃಷ್ಟಿಸುತ್ತಲೇ ಇರುತ್ತಾರೆ. ನಯಾ ಲುಕ್ನಲ್ಲಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ.
ಹಳದಿ ಬಣ್ಣದ ಮಾಡ್ರರ್ನ್ ಡ್ರೆಸ್ನಲ್ಲಿ ಸಖತ್ ಹಾಟ್ ಆಗಿ ಶರಣ್ಯ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಶರಣ್ಯ ಹೊಸ ಅವತಾರಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
ಗಟ್ಟಿಮೇಳ’ (Gattimela) ಸೀರಿಯಲ್ನ ಸಾಹಿತ್ಯ ಪಾತ್ರದ ಮೂಲಕ ಟಿವಿ ಪ್ರಿಯರ ಮನೆಗೆದ್ದ ಚೆಲುವೆ ಈಗ ಬೆಳ್ಳಿಪರದೆಯಲ್ಲಿ ಹೀರೋಯಿನ್ ಮಿಂಚ್ತಿದ್ದಾರೆ. ಈಗಾಗಲೇ 1980, ಹುಟ್ಟುಹಬ್ಬದ ಶುಭಾಶಯಗಳು, ಸ್ಫೂಕಿ ಕಾಲೇಜ್ ಸಿನಿಮಾಗಳಲ್ಲಿ ಶರಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ಗೆ (Golden Star Ganesh) ನಾಯಕಿಯಾಗಿ ‘ಕೃಷ್ಣಂ ಪ್ರಣಯ ಸಖಿ’, ಅನೀಶ್ಗೆ ಜೋಡಿಯಾಗಿ ಹೊಸ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್ಗಳಲ್ಲಿ ಶರಣ್ಯ ಬ್ಯುಸಿಯಾಗಿದ್ದಾರೆ