ಸಾಯಿ ಪಲ್ಲವಿ (Sai pallavi) ಪ್ರತಿಭಾನ್ವಿತ ನಟಿ. ಆದರೆ ಕಳೆದೊಂದು ವರ್ಷದಿಂದ ಸಾಯಿ ಪಲ್ಲವಿ ಅಡ್ರೆಸ್ಗೆ ಇಲ್ಲ. ಗಾರ್ಗಿ ರಿಲೀಸ್ ಆಗಿ ವರ್ಷ ಉರುಳಿದೆ. ಬಳಿಕ ಒಂದೂ ಸಿನಿಮಾ ಬಂದಿಲ್ಲ. ಸಿನಿಮಾ ಘೋಷಣೆಯೂ ಆಗಿಲ್ಲ. ಏನಾಯ್ತು ಸಾಯಿ ಪಲ್ಲವಿ ಬದುಕಲ್ಲಿ? ವಿರಾಟ ಪರ್ವಂ ಇದೊಂದು ಚಿತ್ರಕ್ಕಾಗಿ ಸಾಯಿಪಲ್ಲವಿ ನೀಡಿದ ಸಂದರ್ಶನ ಜೀವನದ ದಿಕ್ಕನ್ನೇ ಬದಲಾಯಿಬಿಡುತ್ತೆ ಅಂತ ಖುದ್ದು ಸಾಯಿಪಲ್ಲವಿ ಅಂದುಕೊಂಡಿರಲಿಲ್ಲ.
ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ವಿವಾದ (Controversy) ಬಗ್ಗೆ ತಮ್ಮದೊಂದು ಅಭಿಪ್ರಾಯ ಹೇಳಲು ಹೋಗಿ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಸಾಯಿಪಲ್ಲವಿ ಈಗ ಸಿನಿಮಾ ರಂಗದಲ್ಲಿ ಹೆಸರೇ ಮರೆಯುವಂತೆ ಕಣ್ಮರೆಯಾಗುತ್ತಿರೋದು ವಿಷಾದ.
ನೈಜ ಅಭಿನಯ. ಸಹಜ ಸೌಂದರ್ಯ. ಅದ್ಭುತ ನೃತ್ಯಕಲೆಗೆ ಹೆಸರಾದ ಪ್ರತಿಭಾನ್ವಿತೆಗೆ ಈಗ ಸಿನಿಮಾ ಅವಕಾಶಗಳೇ ಇಲ್ಲ. ಗಾರ್ಗಿಯೇ ಕೊನೆ. ಮತ್ಯಾವ ಸಿನಿಮಾ ತೆರೆಕಂಡಿಲ್ಲ. ಕಾರ್ತಿಕೇಯನ್ ಜೊತೆ ಅನೌನ್ಸ್ ಆದ ಪ್ರಾಜೆಕ್ಟ್ ಯಾವ ಹಂತದಲ್ಲಿದೆಯೋ ಅದರ ಸುಳಿವೂ ಇಲ್ಲ. ಪರಿಣಾಮ ಪ್ರತಿಭಾನ್ವಿತೆಯ ಕೈ ಖಾಲಿ ಖಾಲಿ. ಕಳೆದ ವರ್ಷ ಸಾಯಿಪಲ್ಲವಿಯ ಮೇಲೆ ಬಂದ ಅಪವಾದಗಳು ಒಂದೆರಡಲ್ಲ. ನಾಗಚೈತನ್ಯ ಜೊತೆ ಲವ್ಸ್ಟೋರಿ ಚಿತ್ರ ಮಾಡ್ತಿರುವಾಗ ಸ್ಯಾಮ್ ನಾಗ್ ಡಿವೋರ್ಸ್ ಮುನ್ನಲೆಗೆ ಬಂತು.
Garlic: ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಉತ್ತರ
ವಿಪರ್ಯಾಸ ಅಂದ್ರೆ ನಾಗ್ ಜೊತೆ ಸಾಯಿಪಲ್ಲವಿ ಸಲುಗೆಯಿಂದ ಕಾಣಿಸ್ಕೊಂಡಿದ್ದಕ್ಕೆ ಇದೇ ಪ್ರೇಮಂ ಬೆಡಗಿಯ ಮೇಲೆ ಗೂಬೆ ಕೂರಿಸಲಾಯಿತು. ಈ ಎರಡು ಹೊಡೆತದಿಂದ ಸಾಯಿಪಲ್ಲವಿ ಸಿನಿಮಾ ರಂಗದಿಂದ ಒಳ್ಳೆಯ ನೀತಿಪಾಠ ಕಲಿತಿದ್ದಾರೆ. ಹೀಗಾಗೇ ಸಾಯಿಪಲ್ಲವಿ ಕರಿಯರ್ ಆಲ್ಮೋಸ್ಟ್ ಮುಗಿಯುವ ಹಂತಕ್ಕೆ ಬಂದು ತಲುಪಿದೆ. ಕುಟುಂಬಸ್ಥರೂ ಕೂಡ ಸಿನಿಮಾ ಸಾಕು ಮದುವೆಯಾಗು ಎಂಬ ಸಲಹೆ ಕೊಡುತ್ತಿದ್ದಾರಂತೆ. ಶೀಘ್ರದಲ್ಲೇ ಸಾಯಿಪಲ್ಲವಿ ಬಣ್ಣಕ್ಕೆ ವಿದಾಯ ಹೇಳಿದ್ರೂ ಆಶ್ಚರ್ಯಪಡಬೇಕಿಲ್ಲ ಎನ್ನುತ್ತಿದೆ ಟಾಲಿವುಡ್ ಗಲ್ಲಿ.