ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿ ನಟಿ ರಶ್ಮಿಕಾ ಮಂದಣ್ಣ ಪರಭಾಷೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡುತ್ತಿರುವ ನಟಿ ಸದಾ ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಗೆ ಗುರಿಯಾಗುತ್ತಿರುತ್ತಾರೆ. ಇದೀಗ ನಟಿ ಇತ್ತೀಚೆಗೆ ಟ್ರೋಲ್ ಆಗಿರುವ ‘ಅನಿಮಲ್’ ಚಿತ್ರದ ದೃಶ್ಯವೊಂದರ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ನಟಿ ನೇಹಾ ಧೂಪಿಯಾ ಶೋಗೆ ರಶ್ಮಿಕಾ ಇತ್ತೀಚೆಗೆ ಆಗಮಿಸಿದ್ದರು. ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ. ದೇಹದ ವಿಚಾರ ಇಟ್ಟುಕೊಂಡು ಮಹಿಳೆಯರನ್ನು ಟ್ರೋಲ್ ಮಾಡಿದ್ದರ ಬಗ್ಗೆ ರಶ್ಮಿಕಾ ಮೌನ ಮುರಿದಿದ್ದಾರೆ. ಸಿನಿಮಾದಲ್ಲಿನ ಡೈಲಾಗ್ ವಿಚಾರಕ್ಕೆ ನನ್ನನ್ನು ಟ್ರೋಲ್ ಮಾಡಿದ್ದಾರೆ. ನನ್ನ ನಟನೆಯ ಬಗ್ಗೆ ನನಗೆ ಅರಿವಿದೆ ಎಂದಿದ್ದಾರೆ.
‘ಅನಿಮಲ್’ ಚಿತ್ರದಲ್ಲಿ ರಣ್ಬೀರ್ ಜೊತೆ 9 ನಿಮಿಷಗಳ ಕರ್ವಾ ಚೌತ್ ದೃಶ್ಯ ಮಾಡುವಾಗ ಸೆಟ್ನಲ್ಲಿರುವ ಜನರು ನನ್ನ ನಟನೆ ನೋಡಿ ಮೆಚ್ಚಿಕೊಂಡಿದ್ದರು. ಆದರೆ ಚಿತ್ರದ ಟ್ರೈಲರ್, ಸಿನಿಮಾ ನೋಡಿದ ಜನರು ಆ ದೃಶ್ಯವನ್ನು ಟ್ರೋಲ್ ಮಾಡಿದರು. ಸೆಟ್ನಲ್ಲಿ ಇಷ್ಟವಾದ ದೃಶ್ಯವನ್ನು ಜನರು ಈಗ ಟ್ರೋಲ್ ಮಾಡುತ್ತಿದ್ದಾರೆ. ಏನು ಶೂಟ್ ಮಾಡಲಾಗಿದೆ, ಹೇಗೆ ಶೂಟ್ ಮಾಡಲಾಗಿದೆ ಎಂಬುದು ನನಗೆ ತಿಳಿದಿದೆ. ಆದರೆ ಜನರಿಗೆ ತಿಳಿದಿಲ್ಲ. ನಾನು ಅದನ್ನು ತಿಳಿಸಬೇಕು. ನಾನು ನೀರಿನ ಮೇಲಿರುವ ಗುಳ್ಳೆಯಂತಿದ್ದೇನೆ ಎಂದು ನಟಿ ಮಾತನಾಡಿದ್ದಾರೆ. ಹಾಗೇ ಇರಲು ನನಗೆ ಇಷ್ಟವಿಲ್ಲ ಎಂದು ಈ ಮೂಲಕ ಟ್ರೋಲಿಗರಿಗೆ ನಟಿ ತಿರುಗೇಟು ನೀಡಿದ್ದಾರೆ.