ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾ ಮದುವೆ ಆರತಕ್ಷತೆ ಫೆ.8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಸಂಭ್ರಮದಲ್ಲಿ ಮೋಹಕತಾರೆ ರಮ್ಯಾ ಬ್ಲ್ಯಾಕ್ ಸೀರೆಯಲ್ಲಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ರಾಣಾ ಹಾಗೂ ಫ್ಯಾಷನ್ ಡಿಸೈನರ್ ರಕ್ಷಿತಾಗೆ ಶುಭ ಕೋರಲು ರಮ್ಯಾ ಕೂಡ ಆರತಕ್ಷತೆಗೆ ಆಗಮಿಸಿದ್ದರು. ಮೋಹಕತಾರೆ ರಮ್ಯಾ ಎಂಟ್ರಿ ನೋಡಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರು ಬೆರಗಾಗಿದ್ದಾರೆ. ಆಕೆಯ ಸೌಂದರ್ಯ ನೋಡಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
ರಕ್ಷಿತಾ ಸಹೋದರನ ಆರತಕ್ಷತೆಯಲ್ಲಿ ಸ್ಲೀವ್ಲೆಸ್ ಬ್ಲೌಸ್ಗೆ ಕಪ್ಪು ಬಣ್ಣದ ಸೀರೆಯುಟ್ಟು ರಮ್ಯಾ ಮಿರ ಮಿರ ಅಂತ ಮಿಂಚಿದ್ದಾರೆ. ವಯಸ್ಸು 42 ವರ್ಷವಾಗಿದ್ರೂ ಬಳುಕುವ ಬಳ್ಳಿಯಂತೆ ರಮ್ಯಾ ಕಂಗೊಳಿಸಿದ್ದಾರೆ. ಅವರ ಫಿಟ್ನೆಸ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.