ಸಿನಿಮಾ ರಂಗದಲ್ಲಿ ಸಾಕಷ್ಟು ಮದುವೆಗಳು ಸದ್ದಿಲ್ಲದೆ ನಡೆದು ಹೋಗುತ್ತವೆ. ಅದೆಷ್ಟೋ ನಟಿ ನಟಿಯರು ತಮಗೆ ಮದುವೆಯಾದ ಸುದ್ದಿಯನ್ನು ಸಾಕಷ್ಟು ವರ್ಷಗಳ ಬಳಿಕವೇ ಬಾಯಿ ಬಿಟ್ಟಿದ್ದಾರೆ. ಇದೀಗ ನಟಿ ರಮ್ಯಾ ಕೂಡ ಸೈಲೆಂಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಮಿಳು ಚಿತ್ರರಂಗದ ನಟಿ, ನಿರ್ದೇಶಕ ದೊರೈ ಪಾಂಡಿಯನ್ ಮಗಳು ರಮ್ಯಾ ಪಾಂಡಿಯನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಮ್ಮಿ ತಪ್ಪಸು ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ರಮ್ಯಾಗೆ ತಮಿಳು ಚಿತ್ರರಂಗದಲ್ಲಿ ಗೆಲುವು ಸಿಗಲಿಲ್ಲ. ‘ಜೋಕರ್’ ಚಿತ್ರ ಹೊರತು ಪಡಿಸಿ ಆನ್ ದೇವತಾಯ್’, ‘ರಾಮೆ ಆಂಡಲುಂ ರಾವನೆ ಅಂದಳುಂ’ ಮತ್ತು ಇತರ ‘ನನ್ಪಕಲ್ ನೆರತು ಮಾಯಕ್ಕಂ’ ಹೀಗೆ ಇವರು ಅಭಿನಯಿಸಿದ್ದ ಯಾವ ಚಿತ್ರ ಕೂಡ ಗೆಲ್ಲಲಿಲ್ಲ. ಇನ್ನೂ ಮುಗಿಲನ್ ಮತ್ತು ಆಕ್ಸಿಡೆಂಟಲ್ ಫಾರ್ಮರ್ ಆಂಡ್ ಕೋ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು ಕೂಡ ರಮ್ಯಾ ಅದೃಷ್ಟ ಖುಲಾಯಿಸಲಿಲ್ಲ.ಯಾವಾಗ ಸಿನಿಮಾ ರಂಗಕ್ಕೆ ಕೈ ಹಿಡಿಯಲಿಲ್ಲವೋ ನಟಿ ರಮ್ಯಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳೋಕೆ ಶುರು ಮಾಡಿದರು. ಕುಕ್ ವಿತ್ ಕೋಮಾಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅಡುಗೆ ಕೈಚಳಕವನ್ನ ತೋರಿಸಿದ ರಮ್ಯಾ ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದರು.
ಇದೀಗ ರಮ್ಯಾ ಲವ್ಲ್ ಧವನ್ ಜೊತೆ ಋಷಿಕೇಶ, ಶಿವಪುರಿ ಗಂಗೈಕರೈನಲ್ಲಿ ಸಪ್ತಪದಿ ತುಳಿದಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಸರಳವಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಲೋವನ್ ಧವನ್ ಮತ್ತು ರಮ್ಯಾ ಪಾಂಡ್ಯಯನ್ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಾಶಯವನ್ನು ಕೋರಿದ್ದಾರೆ. ಚೆನ್ನೈನಲ್ಲಿ ನವೆಂಬರ್ 15ರಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಅಂದ್ಹಾಗೇ ರಮ್ಯಾ ಅವರ ಹೃದಯ ಗೆದ್ದ ಲವ್ಲ್ ಧವನ್ ಬೆಂಗಳೂರಿನ ಹುಡುಗ. ಬೆಂಗಳೂರಿನ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಲೋವನ್ ಯೋಗ ತರಬೇತುದಾರ ಕೂಡ ಹೌದು. ಈ ಯೋಗನೇ ಮದುವೆಯ ಯೋಗ ಕೂಡಿ ಬರಲು ಕಾರಣವಾಗಿದೆ. ಲವ್ಲ್ ಧವನ್ ನಡೆಸಿಕೊಡುವ ಯೋಗ ಶಿಬಿರದಲ್ಲಿ ಕಳೆದ ವರ್ಷ ರಮ್ಯಾ ಭಾಗವಹಿಸಿದ್ದರು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಬಳಿಕ ಪ್ರೀತಿಗೆ ತಿರುಗಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.