ಕಿರುತೆರೆ ನಟಿ ನೇಹಾ ಗೌಡ ಹಾಗೂ ನಟ ಚಂದನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲೇ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ನಟಿ ನೇಹಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಕ್ಟೋಬರ್ 29ರಂದು ನೇಹಾ ಗೌಡಗೆ ಮುದ್ದಾದ ಕಂದನಿಗೆ ಜನ್ಮ ನೀಡಿದ್ದಾರೆ. ನೇಹಾ ಗೌಡ ಹಾಗೂ ಚಂದನ್ ಈ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಂದೆ-ತಾಯಿಯಾದ ಖುಷಿಯಲ್ಲಿರೋ ನೇಹಾ-ಚಂದನ್ಗೆ ಅಭಿಮಾನಗಳು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.
ಅಕ್ಟೋಬರ್ 29 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ. ತಂದೆ ಸ್ವಲ್ಪ ಭಾವುಕರಾಗಿದ್ದಾರೆ ಎಂದು ಬರೆದು ನೇಹಾ ಗೌಡ ತಮ್ಮ ಇನ್ಸ್ಟಾ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಲ್ಯ ಸ್ನೇಹಿತರಾಗಿದ್ದ ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನೇಹಾ ಗೌಡ, ಕನ್ನಡ ಮತ್ತು ತಮಿಳು ಸೀರಿಯಲ್ ಗಳಲ್ಲಿ ನಟಿಸಿದ್ದರೆ, ಇವರ ಪತಿ ಚಂದನ್ ಗೌಡ ಕಲರ್ಸ್ ಕನ್ನಡದ ಅಂತರಪಟ ಸೀರಿಯಲ್ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ಮೊದಲ ಧಾರಾವಾಹಿ ‘ಸ್ವಾತಿ ಚುನುಕುಲು’ ಧಾರಾವಾಹಿ. ಅಷ್ಟೇ ಅಲ್ಲದೆ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಕಲ್ಯಾಣ ಪರಿಸು’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಯಾಲಿಟಿ ಶೋ ಗಳಲ್ಲೂ ಭಾಗವಹಿಸಿ ಮನೆ ಮಾತಾಗಿದ್ರು. ಬಿಕಾಂ ಮುಗಿಯುತ್ತಿದ್ದಂತೆ ಫ್ಯಾಷನ್ ಡಿಸೈನರ್ ಆಗಬೇಕು ಎಂದು ಕನಸು ಕಂಡಿದ್ದರು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಗೊಂಬೆ ಪಾತ್ರ ಚೆನ್ನಾಗಿದೆ ಅಂತ ಒಪ್ಪಿಕೊಂಡಿದ್ದರೇ ವಿನಃ ಅವರಿಗೆ ಆಗ ಧಾರಾವಾಹಿಯಲ್ಲೇ ಮುಂದುವರಿಯುವ ಯೋಚನೆ ಇರಲಿಲ್ವಂತೆ.
‘ಟೇಕ್ ಆಫ್’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದ ನೇಹಾಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ಕೂಡ ನೇಹಾ ಕೆಲಸ ಮಾಡಿದ್ದಾರೆ ನೇಹಾ ಅವರ ಅಭಿನಯ ನೋಡಿ ಮೆಚ್ಚಿಕೊಂಡವರು ಬಹಳ ಮಂದಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೇಹಾ ಹೆಸರಿನಲ್ಲಿ ಸಾಕಷ್ಟು ಫ್ಯಾನ್ಸ್ ಪೇಜ್ ಇವೆ.