ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ ಆಟಕ್ಕೆ ಕೂಡ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಮ್ರತಾ ಆಟ ಪ್ರೇಕ್ಷಕರಿಗೆ ಹಿಡಿಸಿತ್ತು. ಕಿಚ್ಚನ ಚಪ್ಪಾಳೆ, ಉತ್ತಮ ಗಿಟ್ಟಿಸಿಕೊಳ್ಳುವ ಮೂಲಕ ನಮ್ರತಾ ಮೋಡಿ ಮಾಡಿದ್ದರು. ಹಂತ ಹಂತವಾಗಿ ಗೆಲುವಿನ ಮೆಟ್ಟಿಲಿಗೆ ಹತ್ತಿರವಾಗುತ್ತಿದ್ದ ನಮ್ರತಾ ಈಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸ್ನೇಹಿತ್ ಜೊತೆಗಿನ ಲವ್ವಿ-ಡವ್ವಿ ನಂತರ ಕಾರ್ತಿಕ್ ಒಡನಾಟ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟ ಬಳಿಕ ಟ್ರೋಲ್ ವಿಷ್ಯ ನಮ್ರತಾ ತಿಳಿದು ಕಣ್ಣೀರಿಟ್ಟಿದ್ದರು. ಇದೀಗ ತನಿಷಾರ ಮಿಡ್ ವೀಕ್ ಎಲಿಮಿನೇಷನ್ ನಂತರ ಈ ವಾರ ಇನ್ನಿಬ್ಬರು ಸ್ಪರ್ಧಿಗಳು ಔಟ್ ಆಗಲಿದ್ದಾರೆ.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಅದರಲ್ಲಿ ನಮ್ರತಾ, ಬಿಗ್ ಬಾಸ್ ಆಟಕ್ಕೆ ಬ್ರೇಕ್ ಬಿದ್ದಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಾಲಿನಟಿಯಾಗಿ ನಮ್ರತಾ ಬಣ್ಣ ಹಚ್ಚಿದ್ದರು. ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ನಮ್ರತಾ ಸಕ್ರಿಯರಾಗಿದ್ದಾರೆ. ಆಕಾಶದೀಪ, ಪುಟ್ಟಗೌರಿ ಮದುವೆ ಸೀರಿಯಲ್ನಲ್ಲಿ ನಟಿಸಿದ್ದರು. ‘ನಾಗಿಣಿ 2’ ಧಾರಾವಾಹಿ ನಮ್ರತಾ ಕೆರಿಯರ್ಗೆ ಬಿಗ್ ಬ್ರೇಕ್ ನೀಡಿತ್ತು.