ನಟ, ನಟಿಯರು ಅಂದ್ರೆ ಪ್ರತಿಯೊಬ್ಬರಿಗೂ ಅವರ ಬಗ್ಗೆ ಸಾಕಷ್ಟು ಕುತೂಹಲ ಇದ್ದೆ ಇರುತ್ತೆ. ಅವರು ಕುಡಿಯೋ ನೀರಿನಿಂದ ಹಿಡಿದು ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿದುಕೊಳ್ಳುವ ಕ್ಯೂರಿಯಾಸಿಟಿ ಸಾಕಷ್ಟು ಮಂದಿಯದ್ದು. ಜೊತೆಗೆ ಅವರನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ಸಾಕಷ್ಟು ಇರುತ್ತೆ. ಇದೇ ಕಾರಣಕ್ಕೆ ನಟಿಯರು ಆಗಾಗ ಸುಳ್ಳು ಹೇಳಿ ಸಿಕ್ಕಿ ಬಿಳೋದು ಇದೆ. ಇದೀಗ ಬಾಲಿವುಡ್ ಬ್ಯೂಟಿ ನಟಿ ಮಲೈಕಾ ಅರೋರಾ ಸುಳ್ಳು ಹೇಳಿ ಸರಿಯಾಗಿಯೇ ನೆಟ್ಟಿಗರ ಕೈಗೆ ತಗಲಾಕಿಕೊಂಡಿದ್ದಾರೆ.
ಸಾಕಷ್ಟು ನಟಿಯರು ತಾವು ಪ್ರಾಣಿಗಳಿಗೆ ಹಿಂಸೆ ನೀಡಬಾರದು ಎಂಬ ಕಾರಣಕ್ಕೆ ಮಾಂಸಹಾರ ತ್ಯಜಿಸಿ ಸಸ್ಯಹಾರಿಗಳಾಗಿದ್ದಾರೆ. ಹಲವು ಸಿನಿಮಾ ನಟ ನಟಿಯರು ತಾವು ಈಗ ವೆಜಿಟೇರಿಯನ್ ಆಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ, ಪ್ರಾಣಿಗಳಿಗೆ ಹಿಂಸೆ ಕೊಡುವುದು ತಪ್ಪು ಅನ್ನೋ ಕಾರಣಕ್ಕಾಗಿ ನಾವು ಶಾಖಾಹಾರಿಯಾಗಿದ್ದೇವೆ ಎಂದಿದ್ದಾರೆ. ಕೆಲವರು ನಿಜವಾಗಿಯೂ ವೆಜಿಟೇರಿಯನ್ ಆಗಿದ್ದಾರೆ. ಆದರೆ ನಟಿ ಮಲೈಕಾ ಅರೋರಾ ತಾವು ವೆಜಿಟೇರಿಯನ್ ಎಂದು ವೀಡಿಯೋ ಮುಂದೆ ಹೇಳಿಕೊಂಡು, ಸೆಟ್ನಲ್ಲಿ ನಾನ್ವೆಜ್ ಊಟ ಮಾಡುತ್ತಿದ್ದಾರೆ.
ಮಲೈಕಾ ನಾನ್ವೆಜ್ ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನಾರ್ಮಲ್ ಆಗಿ ಅಪ್ಲೋಡ್ ಆಗಿತ್ತು. ಆದರೆ ಮಲೈಕಾ ತಾನು ವೆಜಿಟೇರಿಯನ್ ಎಂದು ನಾನ್ವೆಜ್ ತಿಂತಿದ್ದಾರೆ ಅಂತಾ ಕೆಲವರು ಹೇಳಿದಾಗ, ಮಲೈಕಾ ಬಂಡವಾಳ ಬಯಲಾಗಿದೆ. ಮಲೈಕಾ ಬಂಡವಾಳ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾವು ಸಸ್ಯಹಾರಿಗಳು ಎಂದು ಹೇಳಿರುವ ಇತರ ನಟ ನಟಿಯರ ಮೇಲೂ ಅನುಮಾನ ಬರುಂತೆ ಆಗಿದೆ.
ಅಲ್ಲದೇ ತಾನು ಶಾಖಹಾರಿ ಎಂದುಕೊಂಡು ಮಲೈಕಾ ಪೇಟಾ ಸಂಸ್ಥೆಯ ಮೆಂಬರ್ ಆಗಿದ್ದಾರೆ. ಪೇಟಾ ಸಂಸ್ಥೆಯಲ್ಲಿ ಯಾರು ಮೆಂಬರ್ ಆಗಿರುತ್ತಾರೋ, ಅವರು ಪ್ರಾಣಿಹಿಂಸೆ ಮಾಡುವಂತಿಲ್ಲ. ಪ್ರಾಣಿಗಳನ್ನು ಸಾಕಿರಬೇಕು. ಅಂಥವರನ್ನು ಪೇಟಾ ಸಂಸ್ಥೆ ಅವಾರ್ಡ್ ನೀಡಿ, ಗೌರವಿಸುತ್ತದೆ. ಬಾಲಿವುಡ್ನಲ್ಲಿ ಸನ್ನಿಲಿಯೋನ್ ಸೇರಿ, ಹಲವು ಸೆಲೆಬ್ರಿಟಿಗಳಿಗೆ ಈ ಅವಾರ್ಡ್ ಸಿಕ್ಕಿದೆ. ಇದೀಗ ಮಲೈಕಾ ನೆಟ್ಟಿಗರ ಕೈಗೆ ತಗಲಾಕಿಕೊಂಡು ತಮ್ಮ ಬಂಡವಾಳವನ್ನು ತಾವೆ ಬಯಲು ಮಾಡಿಕೊಂಡಿದ್ದಾರೆ.