ಮಿಸ್ ಮ್ಯಾಚ್ ಜೋಡಿ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮಿ (Mahalakshmi) ಅವರ ಪತಿ ರವೀಂದರ್ (Ravindran Chandrasekhar) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳಿಂದ ಈ ಸುದ್ದಿ ಸಖತ್ ಸದ್ದು ಮಾಡುತ್ತಿದೆ.
ರವೀಂದರ್, ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಎದೆನೋವು ಕೂಡ ಇರುವುದರಿಂದ ಉಸಿರಾಡೋಕೆ ಕಷ್ಟವಾಗುತ್ತಿದೆ ಎನ್ನುವುದು ಅವರ ಆಪ್ತರು ನೀಡಿದ ಮಾಹಿತಿ. ಉಸಿರಾದ ತೊಂದರೆ ಇರುವ ಕಾರಣಕ್ಕಾಗಿಯೇ ಆಕ್ಸಿಜನ್ ಮಾಸ್ಕ್ ಸಮೇತ ಇರುವ ಫೋಟೋ ಹರಿದಾಡುತ್ತಿದೆ.
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ರವೀಂದರ್ ಇತ್ತೀಚೆಗಷ್ಟೇ ಜೈಲಿಗೂ ಹೋಗಿ ಬಂದಿದ್ದರು. ಜೊತೆಗೆ ಬಿಗ್ ಬಾಸ್ ಶೋ ಕುರಿತಂತೆ ಅವರು ಯೂಟ್ಯೂಬ್ ವೊಂದರಲ್ಲಿ ವಿಮರ್ಶೆ ಮಾಡುತ್ತಿದ್ದರು. ಈ ಯೂಟ್ಯೂಬ್ ಮೂಲಕವೇ ಅವರ ಅನಾರೋಗ್ಯದ ಗುಟ್ಟು ಬಯಲಾಗಿದೆ.