ಕಿರುತೆರೆ ಜನಪ್ರಿಯ ‘ಜೋಡಿಹಕ್ಕಿ’ (Jodihakki) ನಟಿ ಮಧುಶ್ರೀ ಅಯ್ಯರ್ (Madhushree Iyer) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡನೇ ಮಗುವಿನ (Second Baby) ನಿರೀಕ್ಷೆಯಲ್ಲಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋ ನಟಿ ಶೇರ್ ಮಾಡಿದ್ದಾರೆ.
ಮಧುಶ್ರೀ ಅಯ್ಯರ್ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ವಿಚಾರವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಕುಟುಂಬದ ಜೊತೆಗೆ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ತೆಗೆದ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಮಧುಶ್ರೀ ಅಯ್ಯರ್ ಗರ್ಭಿಣಿಯಾಗಿದ್ದು, ಪತಿ ಯಶ್ ಹಾಗೂ ಮೊದಲ ಮಗು ಸ್ವರ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. 2018ರಲ್ಲಿ ವಿವಾಹವಾದ ನಟಿ ಮಧು 2020ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದೆ ಮಧುಶ್ರೀ ಕುಟುಂಬ.
ಜೋಡಿಹಕ್ಕಿ, ರಾಧಾ ರಮಣ, ಅವಳು ಸೀರಿಯಲ್ಗಳಲ್ಲಿ ಮಧುಶ್ರೀ ನಟಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ನಟಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕ ಬಣ್ಣದ ಲೋಕದಿಂದ ನಟಿ ಬ್ರೇಕ್ ಪಡೆದರು.