ಮಲಯಾಳಂ ಚಿತ್ರ ರಂಗದ ಖ್ಯಾತ ನಟಿ ಲೆನಾ ಕುಮಾರ್ ಎರಡನೇ ಮದುವೆಯಾಗಿದ್ದಾರೆ. ಒಂದು ತಿಂಗಳ ಹಿಂದೆಯೇ ಮದುವೆಯಾಗಿರುವ ನಟಿ ಕಳೆದೆರಡು ದಿನಗಳ ಹಿಂದಷ್ಟೇ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಇಸ್ರೋ ನಡೆಸುತ್ತಿರುವ ಗಗನಯಾನ್ ಗೆ ಆಯ್ಕೆಯಾದ ನಾಲ್ವರ ಹೆಸರನ್ನು ಪ್ರಕಟಿಸುತ್ತಿದ್ದಂತೆಯೇ ಲೆನಾ ಕೂಡ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಲೆನಾ ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಗನಯಾನ್ ಗೆ ಹೊರಟಿರುವ ನಾಲ್ವರ ಪೈಕಿ ಲೆನಾ ಮದುವೆ ಆಗಿರುವ ಹುಡುಗ ಕೂಡ ಒಬ್ಬರು. ಪ್ರಶಾಂತ್ ಬಾಲಕೃಷ್ಣ ನಾಯರ್ ಜೊತೆ ಜನವರಿ 17ರಂದು ಲೆನಾ ಮದುವೆ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ನಟಿಯೇ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಹೇಳುವುದಕ್ಕಾಗಿ ನಾನು ಈ ದಿನ ಕಾಯುತ್ತಿದ್ದೆ ಎಂದು ನಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/C35aCcmyYXl/
ಪ್ರಶಾಂತ್ ಬಾಲಕೃಷ್ಣ ನಾಯರ್ ಗ್ರೂಪ್ ಕ್ಯಾಪ್ಟನ್ ಆಗಿ ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿ ಕೆಲಸ ಮಾಡಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಗಂಟೆಗಳ ಕಾಲ ವಿಮಾನ ಹಾರಟ ಮಾಡಿದ ಹೆಮ್ಮೆ ಅವರದ್ದು. ಯುದ್ಧ ವಿಮಾನಗಳನ್ನೂ ಹಾರಿಸಿರುವ ಪ್ರಶಾಂತ್ ಜೊತೆ ಸಾಂಪ್ರದಾಯಿಕವಾಗಿ ಲೆನಾ ಮದುವೆ ಆಗಿದ್ದಾರೆ.
2004ರಲ್ಲಿ ಅಭಿಲಾಷೆ ಎನ್ನುವವರ ಜೊತೆ ಮದುವೆಯಾಗಿದ್ದ ಲೆನಾ ಹನ್ನೊಂದು ವರ್ಷಗಳ ನಂತರ ದೂರ ದೂರವಾಗಿದ್ದರು. ಇದೀಗ ಮತ್ತೆ ಪ್ರಶಾಂತ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿರುವ ನಟಿಗೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ.