ವಿವಾದಿತ ಹೇಳಿಕೆಗಳ ಮೂಲಕವೇ ಹೆಚ್ಚು ಹೆಚ್ಚು ಸುದ್ದಿಯಾಗುವ ನಟಿ ಕಸ್ತೂರಿ ಶಂಕರ್ ಇದೀಗ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಕಸ್ತೂರಿ ತೆಲುಗು ಜನರ ವಿರುದ್ಧ ಕಮೆಂಟ್ ಗಳನ್ನು ಮಾಡಿದ್ರು. ಇದ್ರಿಂದಾಗಿ ಆಕೆಯ ವಿರುದ್ಧ ಚೆನ್ನೈನಲ್ಲಿ ಹಲವು ಕೇಸ್ ದಾಖಲಾಗಿದ್ದವು. ಆದ್ರೆ ಈ ಪ್ರಕರಣಗಳಲ್ಲಿ ಆಕೆಗೆ ಸಮನ್ಸ್ ನೀಡಲು ಚೆನ್ನೈ ಪೊಲೀಸರು ಆಕೆಯ ಮನೆಗೆ ಹೋದಾಗ ಮನೆಗೆ ಬೀಗ ಹಾಕಿರೋದು ಗೊತ್ತಾಗಿದೆ. ಕಸ್ತೂರಿ ಫೋನ್ ಕೂಡ ಸ್ವಿಚ್ ಆಗಿದ್ದು ಬಂಧನ ಭೀತಿಯಲ್ಲೇ ನಟಿ ಊರು ಬಿಟ್ಟಿದ್ದಾರಂತೆ. ಹೀಗಾಗಿ ನಟಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಸ್ತೂರಿ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ನಟಿ ಮಾತುಗಳಿಗೆ ಟೀಕೆ ವ್ಯಕ್ತವಾಗಿತ್ತು. ಬಳಿಕ ನಟಿ ಕಸ್ತೂರಿ ಕ್ಷಮೆ ಯಾಚಿಸಿದರು. ತೆಲುಗು ಸಿನಿಮಾದಲ್ಲಿ ನನ್ನ ಹೆಜ್ಜೆಗಳು.. ತೆಲುಗು ಜನರೆಲ್ಲಾ ನನ್ನ ಕುಟುಂಬ. ಆದರೆ ಡಿಎಂಕೆ ಪಕ್ಷವು ತನ್ನ ಮಾತುಗಳನ್ನು ಬೇರೆ ರೀತಿಯಲ್ಲಿ ಹರಡಿದೆ. ಅವರು ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದರು.
ತಮಿಳುನಾಡಿನ ಹಿಂದೂ ಪೀಪಲ್ಸ್ ಪಾರ್ಟಿಯ ಪರವಾಗಿ ನಟಿ ಕಸ್ತೂರಿ ಅವರು ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನು ತರಬೇಕು ಎನ್ನುವ ಸಂದರ್ಭದಲ್ಲಿ ತೆಲುಗು ಜನರ ವಿರುದ್ಧ ಅನುಚಿತವಾದ ಕಾಮೆಂಟ್ ಗಳನ್ನು ಮಾಡಿದರು. ಸುಮಾರು 300 ವರ್ಷಗಳ ಹಿಂದೆ ರಾಜರ ಕಾಲದಲ್ಲಿ ಮಹಿಳೆಯರ ಸೇವೆ ಮಾಡಲು ತೆಲುಗು ಜನರು ತಮಿಳುನಾಡಿಗೆ ಬರುತ್ತಿದ್ದರು ಎಂದು ನಟಿ ಕಸ್ತೂರಿ ಹೇಳಿದ್ದರು.
ಹಾಗೆ ಬಂದವರೆಲ್ಲ ಈಗ ತಮಿಳು ಜನಾಂಗ ಎಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದಾರೆ. ಇಲ್ಲಿಗೆ ಬಂದ ಬ್ರಾಹ್ಮಣರು ತಮಿಳರಲ್ಲ ಎಂದು ಹೇಳಲು ತೆಲುಗಿನವರು ಯಾರು? ಎಂದು ಕೇಳಿದ್ರು. ನಟಿಯ ಮಾತುಗಳಿಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಕಸ್ತೂರಿ ವಿರುದ್ಧ ದೂರು ದಾಖಲಾಗಿದೆ.
ಡಿಎಂಕೆ ಪಕ್ಷದ ನಾಯಕರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಕಸ್ತೂರಿ ಆಕ್ರೋಶ ವ್ಯಕ್ತಪಡಿಸಿದ್ರು. ಕಸ್ತೂರಿ ವಿರುದ್ಧ ಈಗಾಗಲೇ ಚೆನ್ನೈ ಮತ್ತು ಮಧುರೈನಲ್ಲಿ ಪ್ರಕರಣ ದಾಖಲಾಗಿವೆ. ಪೊಲೀಸರು ಸಮನ್ಸ್ ನೀಡಲು ಆಕೆಯ ಮನೆಗೆ ಹೋದಾಗ ನಟಿ ಎಸ್ಕೇಪ್ ಆಗಿರೋದು ಗೊತ್ತಾಗಿದೆ. ಫೋನ್ ಸ್ವಿಚ್ ಆಫ್ ಆಗಿದ್ದರಿಂದ ನಟಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.