ತಮ್ಮ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜ್ಯೋತಿ ರೈ ಅವರು ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರಿನ ಕೊರತೆ.. ಹೆಚ್ ಕೆ ಪಾಟೀಲ್ ಹೇಳಿದ್ದೇನು!?
ಮಾರ್ಫಿಂಗ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನಟಿ ಜ್ಯೋತಿ ರೈ ಮನವಿ ಮಾಡಿದ್ದಾರೆ. ನನ್ನ ಮಾನ ಹಾಗೂ ಕುಟುಂಬದ ಗೌರವ ಅಪಾಯದಲ್ಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನನ್ನ ಜೀವನದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ದೂರಿನಲ್ಲಿ ನಟಿ ಕಳವಳ ವ್ಯಕ್ತಪಡಿಸಿದ್ದಾರೆ.
ನಾನು ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ನಿತ್ಯ ಬಳಕೆ ಮಾಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಫೇಕ್ ಅಕೌಂಟ್ಗಳ ಮೂಲಕ ನನಗೆ ಮೆಸೇಜ್ಗಳು ಬರುತ್ತಿವೆ. ನನ್ನ ಫೋಟೋಗಳ ಜೊತೆಗೆ ಇಂಟರ್ನೆಟ್ ಡೌನ್ಲೋಡ್ ಮಾಡಲಾದ ನಗ್ನ ಹಾಗೂ ಅಶ್ಲೀಲ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ನನ್ನ ಇನ್ಬಾಕ್ಸ್ಗೆ ಕಳುಹಿಸುತ್ತಿದ್ದಾರೆ. ನನ್ನ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಹಾಕಲಾದ ಫೋಟೋಗಳನ್ನು ಬಳಸಿ ಮಾರ್ಫಿಂಗ್ ಮಾಡಲಾಗಿದೆ. ನನಗೆ ಕಿರುಕುಳ ನೀಡುವ ಮತ್ತು ನನ್ನ ಮಾನಹಾನಿ ಮಾಡುವ ಉದ್ದೇಶದಿಂದಲೇ ಮಾಡಲಾಗಿದೆ ಎಂದಿದ್ದಾರೆ. ಕೆಲವು ದಿವಸಗಳ ಹಿಂದೆಯೇ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದೇನೆ. ನನ್ನ ಕುಟಂಬದವರ ಮಾನ ಹರಾಜು ಹಾಕುವವರಿಗೆ ಖಂಡಿತಾ ಕಠಿಣ ಶಿಕ್ಷೆ ಆಗತ್ತೆ ಎಂದು ಜ್ಯೋತಿ ರೈ ಕಿಡಿಗೇಡಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.