ಕಮಲಿ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ಆ ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ನಟಿ ಅಮೂಲ್ಯ ಗೌಡ ಇದೀಗ ಶ್ರೀಗೌರಿ ಧಾರವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಅಮೂಲ್ಯ ಗೌಡ ಇದೀಗ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ನೀಡಿದ್ದಾರೆ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರೀಗೌರಿ ಹೆಸರಿನ ಧಾರವಾಹಿ ಪ್ರಸಾರವಾಗುತ್ತಿದ್ದು ಪ್ರಮುಖ ಪಾತ್ರದಲ್ಲಿ ಅಮೂಲ್ಯ ಗೌಡ ನಟಿಸುತ್ತಿದ್ದಾರೆ. ಶ್ರೀಗೌರಿ ಕತೆಯ ತಿರುಳು, ಪಾತ್ರಗಳು, ಶೂಟಿಂಗ್ ಲೋಕೇಷನ್ಸ್ ಇವೆಲ್ಲವು ಎಲ್ಲಾ ಧಾರಾವಾಹಿಗಳಿಗಿಂತ ತುಂಬ ವಿಭಿನ್ನವಾಗಿ ಬರ್ತಿತ್ತು. ಅಲ್ಲದೇ ವೀಕ್ಷಕರಿಗೆ ಕತೆಯ ಶೂಟಿಂಗ್ ಲೋಕೇಷನ್ಸ್ಗಳು ಇಷ್ಟ ಕೂಡ ಆಗಿತ್ತು. ಜೊತೆಗೆ ಶ್ರೀಗೌರಿ ಸೀರಿಯಲ್ನಲ್ಲಿ ಕಂಬಳವನ್ನ ತೋರಿಸಿದ್ದು ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದರು.
ಗೌರಿ ಜೀವನದಲ್ಲಿ ಸ್ವಂತ ಕುಟುಂಬನೇ ವಿಲನ್ ಆಗಿತ್ತು. ಎಲ್ಲರ ಲೈಫ್ನಲ್ಲೂ ಅಜ್ಜಿ ಪ್ರೀತಿಗೆ ವಿಶೇಷವಾದ ಸ್ಥಾನ ಇದ್ರೆ ಇದಕ್ಕೆ ತದ್ವಿರುದ್ಧವಾಗಿತ್ತು ಗೌರಿ ಬದುಕು. ಅಮ್ಮನಿಲ್ಲದ ಗೌರಿಗೆ ಅಪ್ಪನೇ ಪ್ರಪಂಚ ಆದ್ರೆ ಕಾಡೋ ಕರಾಳ ರಾತ್ರಿ ಗೌರಿ ಪ್ರಪಂಚ ಬದಲಾಗುವಂತೆ ಮಾಡಿತ್ತು. ಆದರೆ ಇದೀಗ ಶ್ರೀಗೌರಿ ಸೀರಿಯಲ್ ಮುಕ್ತಾಯ ಕಂಡಿದೆ.
ಶ್ರೀಗೌರಿ ಸೀರಿಯಲ್ನಲ್ಲಿ ಎಲ್ಲಾ ಪಾತ್ರಗಳು ವಿಭಿನ್ನವಾಗಿ ಮೂಡಿ ಬರುತ್ತಿದ್ದವು. ಮುದ್ದು ಮೊಗದ ಚೆಲುವೆ ಗೌರಿಯನ್ನ ವೀಕ್ಷಕರು ಮೆಚ್ಚಿಕೊಂಡಿದ್ದರು. ಮೂಗಿನ ಮೇಲೆ ಕೋಪ ಇಟ್ಕೊಂಡೇ ಓಡಾಡೋ ಅಪ್ಪುನ ರಗಡ್ನೆಸ್ ಕೂಡ ತುಂಬಾ ಇಷ್ಟ ಆಗಿತ್ತು. ಕತೆಯಲ್ಲಿ ಗೌರಿಗೆ ಏನೋ ಒಂದು ಸಮಸ್ಯೆ ಈ ಸಮಸ್ಯೆಯೇ ಕತೆಯ ಪ್ರಮುಖ ಕೇಂದ್ರ ಬಿಂದು ಆಗಿತ್ತು. ಈ ವಿಚಾರ ಅಪ್ಪುಗೆ ಗೊತ್ತಾದರೇ ಏನಾಗುತ್ತೆ ಅನ್ನೋ ಟ್ವಿಸ್ಟ್ಗೋಸ್ಕರನೇ ವೀಕ್ಷಕರು ಕೂಡ ಕಾತುರದಿಂದ ಕಾಯುತ್ತಿದ್ದರು. ಆದರೆ ಇದೀಗ ಈ ಧಾರಾವಾಹಿ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ವೀಕ್ಷಕರು ಬೇಸರ ಹೊರ ಹಾಕಿದ್ದಾರೆ. ಯಾಕೆ ಇಷ್ಟು ಬೇಗ ಮುಗಿತಾ ಇದೆ? ರೇಟಿಂಗ್ ಕಡಿಮೆ ಇದೆಯಾ? ಉತ್ತಮ ಧಾರಾವಾಹಿ ಬೇಗ ಮುಗಿಯುತ್ತಿದೆ ಅಂತ ಕಾಮೆಂಟ್ಸ್ ಹಾಕುವ ಮೂಲಕ ಬೇಸರ ಹೊರ ಹಾಕುತ್ತಿದ್ದಾರೆ. ಇನ್ನೂ, ಶ್ರೀಗೌರಿ ಧಾರಾವಾಹಿಯ ಜಾಗಕ್ಕೆ ಎಂದರೆ 8.30ರ ಸ್ಲಾಟ್ಗೆ ಹೊಚ್ಚ ಹೊಸ ಕಥೆ ಎಂಟ್ರಿಯಾಗಿದೆ. ಅದುವೇ ನೂರು ಜನ್ಮಕೂ ಧಾರಾವಾಹಿ. ಇದೇ ಸೀರಿಯಲ್ನಲ್ಲಿ ಗೀತಾ ಖ್ಯಾತಿಯ ನಟ ಧನುಷ್ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ.