‘ಅಣ್ಣ ತಂಗಿ’ ಸೀರಿಯಲ್ ನಟಿ ಅಖಿಲಾ ಪ್ರಕಾಶ್ (Akhila Prakash) ಅವರು ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟಿದ್ದಾರೆ.
ಭರತ್ ಕಾಂತ್ ಎಂಬುವವರ ಜೊತೆ ಅಖಿಲಾ ಹೊಸ ಬಾಳಿಗೆ ಕಾಲಿಟ್ಟಿದ್ದು, ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಕೊಡಗಿನ ಕುವರಿ ಅಖಿಲಾ ಪ್ರಕಾಶ್ ಮತ್ತು ಭರತ್ ಕಾಂತ್ (Bharath Kanth) ಹಲವು ವರ್ಷಗಳು ಪ್ರೀತಿಸಿ, ಗುರುಹಿರಿಯರ ಸಮ್ಮತಿ ಪಡೆದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೀಗ ಮದುವೆಯಾಗಿದ್ದಾರೆ.
ಅಖಿಲಾ ಪ್ರಕಾಶ್ ಮದುವೆಗೆ ‘ಅಣ್ಣ ತಂಗಿ’ (Anna Thangi Serial) ಸೀರಿಯಲ್ ತಂಡ ಮತ್ತು ಹಲವು ಕಿರುತೆರೆ ಕಲಾವಿದರು ಆಗಮಿಸಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ.