ಗದಗ:- ನಟ ಯಶ್ ಅಭಿಮಾನಿಗಳ ದಾರುಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕರ ಕುಟುಂಬಸ್ಥರನ್ನ ಭೇಟಿ ಮಾಡಿದ ಬಳಿಕ ಸಚಿವ ಹೆಚ್.ಕೆ.ಪಾಟೀಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈ ದುರ್ಘಟನೆ ಮೂರು ಜೀವಗಳನ್ನ ಬಲಿ ತೆಗೆದುಕೊಂಡಿದೆ. ನಾಲ್ಕು ಜನರಿಗೆ ಗಾಯಗಳಾಗಿದ್ದು, ಮೂರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಈಗಾಗಲೇ ಚೇತರಿಕೆ ಕಂಡಿದ್ದಾರೆ. ಗಂಟಲು ಮೂಲಕ ಶಾಕ್ ಪ್ರವಹಿಸಿರೋದ್ರಿಂದ ಒಬ್ಬನಿಗೆ ಊಟ ಮಾಡೋದಕ್ಕೆ ಆಗ್ತಾ ಇಲ್ಲ. ಆದರೆ ಜೀವಕ್ಕೆ ಯಾವ ತೊಂದರೆಯೂ ಇಲ್ಲ ಅನ್ನೋ ಮಾಹಿತಿ ಇದೆ..
ಮೃತ ಮೂರು ಜನ ಕುಟುಂಬದ ಪರಿಸ್ಥಿತಿ ಬಹಳಷ್ಟು ಸಮಸ್ಯಾತ್ಮವಾಗಿದೆ.ಮೃತ ಯುವಕರು ಕುಟುಂಬಗಳಿಗೆ ಆಧಾರ ಸ್ತಂಭಗಳಾಗಿದ್ರು.ಈ ಘಟನೆ ಬಹಳಷ್ಟು ನೋವು ತಂದಿದೆ. ಈ ರೀತಿಯ ಘಟನೆ ಮರುಕಳಿಸಬಾರದು ಅನ್ನೋ ಚಿಂತನೆ ಬಹಳಷ್ಟು ನಡೀತಿದೆ. ಈ ರೀತಿಯ ಘಟನೆಗಳು ಮರುಕಳಿಸದಾಗೆ ಪೋಸ್ಟರ್ ಹಾಗೂ ಬ್ಯಾನರ್ ಅಳವಡಿಕೆಗೆ ನಿಯಮ ರೂಪಿಸುವಂತೆ ಸಲಹೆ,ಸೂಚನೆ ಬಂದಿವೆ. ಸರ್ಕಾರ ಆ ದಿಸೆಯಲ್ಲಿ ಚಿಂತನೆ ಮಾಡ್ತದೆ. ಸಿಎಂ ಅವರ ಗಮನಕ್ಕೆ ಈ ಘಟನೆ ತಂದಂಥ ವೇಳೆ ಬಹಳಷ್ಟು ಮನನೊಂದರು. ಬಡಕುಟುಂಬಗಳಿಗೆ ಆಗಿರೋ ಹಾನಿಗೆ ಮನ್ನಣೆ ನೀಡಿದ್ರು..
ಮೃತ ಕುಟುಂಬಗಳಿಗೆ ತಲಾ 2.ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50.ಸಾವಿರ ನೀಡಲಾಗಿದೆ. ಭೂ ಒಡೆತನ ಯೋಜನೆಯಡಿ ಭೂಮಿ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಬಗ್ಗೆ ಅನುಕಂಪದ ದೃಷ್ಟಿಯಲ್ಲಿ ಸರ್ಕಾರ ಸೂಕ್ತ ರೀತಿ ಕ್ರಮ ತೆಗೆದುಕೊಳ್ಳಲಿದೆ. ಕುಟುಂಬಸ್ಥರೆಲ್ರೂ ಮಕ್ಕಳನ್ನ ಕಳೆದುಕೊಂಡ ಅತೀವ ದುಃಖದಲ್ಲಿದ್ದಾರೆ..
ವಾಸ್ತವಿಕವಾಗಿ ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವದು ಸತ್ಯ. ಮೂರು ದಿವಸದಲ್ಲಿ ವೈದ್ಯರು ಬಂದು ರಿಪೋರ್ಟ್ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ ಎಂದರು.