ಕಳೆದ ಕೆಲ ದಿನಗಳಿಂದ ತಮಿಳು ಚಿತ್ರರಂಗದಲ್ಲಿ ನಟ ವಿಶಾಲ್ ಆರೋಗ್ಯದ ಕುರಿತಾಗಿಯೇ ಸುದ್ದಿಗಳು ಹರಿದಾಡುತ್ತಿದೆ. 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ ಮದಗಜರಾಜ ಚಿತ್ರ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ವಿಶಾಲ್ ಅವರನ್ನು ಕಂಡು ಪ್ರತಿಯೊಬ್ಬರು ಶಾಕ್ ಆಗಿದ್ದರು. ವೇದಿಕೆಯ ಮೇಲೆ ನಡುಗುವ ಕೈಗಳಿಂದಲೇ ಮೈಕ್ ಹಿಡಿದು ತೊದಲು ಮಾತನಾಡಿದ್ದು ವಿಶಾಲ್ ಕಂಡು ಹಲವರು ಕಣ್ಣೀರು ಹಾಕಿದ್ದರು. ಬಳಿಕ ನಟನ ಆರೋಗ್ಯದ ಬಗ್ಗೆ ಹಲವು ವದಂತಿಗಳು ವೈರಲ್ ಆದವು. ಇದೀಗ ಈ ಎಲ್ಲ ವದಂತಿಗಳಿಗೆ ವಿಶಾಲ್ ಮ್ಯಾನೇಜರ್ ಬ್ರೇಕ್ ಹಾಕಿದ್ದಾರೆ.
ನಟ ವಿಶಾಲ್ ಅವರು ತೀವ್ರ ಚಳಿ, ಜ್ವರ, ನೆಗಡಿಯಿಂದ ಬಳಲುತ್ತಿದ್ದಾರಂತೆ. ವೈರಲ್ ಫೀವರ್ ಅವರನ್ನ ಕಾಡ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿತ್ತು. ನಟನ ಅವರ ಆರೋಗ್ಯದ ಬಗ್ಗೆ ಹರಡಿರುವ ವದಂತಿಗಳು ಮತ್ತು ಊಹಾಪೋಹಗಳ ನಡುವೆ, ವಿಶಾಲ್ ಅವರ ಮ್ಯಾನೇಜರ್ ಹರಿ ಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ.
ವೈರಲ್ ಜ್ವರದಿಂದ ವಿಶಾಲ್ ಬಾಡಿ ಪೇನ್ ಮತ್ತು ಸುಸ್ತು ಅನುಭವಿಸುತ್ತಿದ್ದಾರೆ.ಹೀಗಾಗಿ ವೈದ್ಯರು ಮನೆಯಲ್ಲಿಯೇ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ ಎಂದು ವಿಶಾಲ್ ಮ್ಯಾನೇಜರ್ ಹೇಳಿದ್ದಾರೆ. ವಿಶಾಲ್ ಅವರ ಸ್ಥಿತಿಯ ವದಂತಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದರು. ನಟ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಮ್ಯಾನೇಜರ್ ಭರವಸೆ ನೀಡಿದ್ದಾರೆ.
2012ರಲ್ಲಿ ಸುಂದರ್ ಸಿ ನಿರ್ದೇಶನದ ವಿಶಾಲ್ ಅಭಿನಯದ ‘ಮದಗಜರಾಜ’ ಚಿತ್ರೀಕರಣವೂ ಅಷ್ಟೇ ವೇಗದಲ್ಲಿ ಮುಗಿದಿತ್ತು. ಇದೇ ವರ್ಷ ಚಿತ್ರ ತೆರೆಗೆ ಬರುವ ನಿರೀಕ್ಷೆ ಇತ್ತು. ಆದ್ರೆ ಬಿಡುಗಡೆ ಕಾರಣಾಂತರದಿಂದ ರಿಲೀಸ್ ಆಗಲಿಲ್ಲ. ಇದೀಗ ಸಂಕ್ರಾಂತಿ ಸಂದರ್ಭದಲ್ಲಿ ತೆರೆಗೆ ಬರಲು ಸಜ್ಜಾಗಿದೆ.