ಇತ್ತೀಚೆಗೆ ರಿಲೀಸ್ ಆದ ದಿ ಸಾಬರಮತಿ ರಿಪೋರ್ಟ್ ಸಿನಿಮಾ ಸಾಕಷ್ಟು ಮೆಚ್ಚುಗೆ ಘಳಿಸಿದೆ. ಇತ್ತೀಚೆಗೆ ಸಿನಿಮಾ ನೋಡಿದ ಪ್ರಧಾನಿ ನರೇಂದ್ರ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಕಲಾವಿದರು ಹಾಗೂ ಸಿನಿಮಾವನ್ನು ಸಾಕಷ್ಟು ಹೊಗಳಿಸಿದ್ದರು. ಈ ಮಧ್ಯೆ ನಟ ವಿಕ್ರಾಂತ್ ಮಾಸಿ ಏಕಾಏಕಿ ನಿವೃತ್ತಿ ಘೋಷಿಸುತ್ತಾರೆ ಎಂಬ ಸುದ್ದಿ ಹಬ್ಬಿದ್ದರಿಂದ ಅಭಿಮಾನಿಗಳಿಗೆ ಬೇಸರ ಆಗಿತ್ತು. ಆದರೆ ಆ ಕುರಿತು ಸ್ವತಃ ವಿಕ್ರಾಂತ್ ಮಾಸಿ ಸ್ಪಷ್ಟನೆ ನೀಡಿದ್ದಾರೆ.
ನಟನೆಯಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ವಿಕ್ರಾಂತ್ ಮಾಸಿ ಅವರು ಸೋಶಿಯಲ್ ಮೀಡಿಯಾಸಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅವರ ಮಾತನ್ನು ಜನರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ಒಂದು ಗ್ಯಾಪ್ ತೆಗೆದುಕೊಳ್ಳಲು ಬಯಸಿದ್ದಾರೆಯೇ ಹೊರತು ಸಂಪೂರ್ಣ ನಿವೃತ್ತಿ ಘೋಷಿಸುತ್ತಿಲ್ಲ. ಈ ವಿಚಾರನನ್ನು ವಿಕ್ರಾಂತ್ ಮಾಸಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ವಿಕ್ರಾಂತ್ ಮಾಸಿ ಅವರು ತುಂಬಾ ಬ್ಯುಸಿ ಆಗಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರು. ಆದ್ದರಿಂದ ಅವರಿಗೆ ವಿಶ್ರಾಂತಿ ಬೇಕಾಗಿದೆ. ತುಂಬ ಬ್ಯುಸಿ ಆಗಿದ್ದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಈ ಎಲ್ಲ ಕಾರಣಗಳಿಂದಾಗಿ ಅವರು ವಿಶ್ರಾಂತಿ ಪಡೆಯುವ ನಿರ್ಧಾರಕ್ಕೆ ಬಂದಿರುವುದಾಗಿ ವಿಕ್ರಾಂತ್ ಮಾಸಿ ಹೇಳಿದ್ದಾರೆ.
ವಿಕ್ರಾಂತ್ ಮಾಸಿ ನಟಿಸಿರುವ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದಲ್ಲಿ ಗೋಧ್ರಾ ಹತ್ಯಾಕಾಂಡದ ಕುರಿತು ಕಥೆ ಹೇಳಲಾಗಿದೆ. ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾವನ್ನು ಡಿಸೆಂಬರ್ 2ರಂದು ಸಂಸತ್ ಭವನದಲ್ಲಿ ನರೇಂದ್ರ ಮೋದಿ ವೀಕ್ಷಿಸಿದರು. ಇಷ್ಟೆಲ್ಲ ಪ್ರಶಂಸೆ ಪಡೆದ ಅವರು ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿದ್ದಾಗ ಅಭಿಮಾನಿಗಳಿಗೆ ಬೇಸರ ಆಗಿದ್ದು ಸಹಜ. ಆದರೆ ಈಗ ಎಲ್ಲರಿಗೂ ನಿರಾಳ ಆಗಿದೆ. ಕೊಂಚ ಸಮಯದ ಬಳಿಕ ವಿಕ್ರಾಂತ್ ಮಾಸಿ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಲಿದ್ದಾರೆ.