ನಟ, ರಾಜಕಾರಣಿ ವಿಜಯಕಾಂತ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಅಂತಿಮ ದರ್ಶನ ಪಡೆದ ಬಳಿಕ ತಮ್ಮ ಕಾರಿನತ್ತ ಹೊರಟಿದ್ದ ವಿಜಯ್ (Vijay) ಮೇಲೆ ಚಪ್ಪಲಿ (Cheppali) ತೂರಿ ಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
We #Ajith fans strongly condemneding this disrespect behaviour to vijay . whoever it may be, we should respect when they came to our place.
Throwing slipper to @actorvijay is totally not acceptable 👎🏻
Stay strong #Vijay #RIPCaptainVijayakanth https://t.co/dVg9RjC7Yy
— AK (@iam_K_A) December 29, 2023
ನೆಚ್ಚಿನ ನಟನ ಅಂತಿಮ ದರ್ಶನ ಪಡೆಯುವುದಕ್ಕಾಗಿ ಜನಸಾಗರವೇ ಹರಿದು ಬಂದಿತ್ತು. ಜನರ ನಡುವೆ ಸಾಗಿ, ತಮ್ಮ ಕಾರಿನತ್ತ ಹೊರಟಿದ್ದರು ವಿಜಯ್. ಕಾರಿನತ್ತ ಹೊರಡಲು ವಿಜಯ್ ಹರಸಾಹಸ ಪಡುತ್ತಿದ್ದರು. ಈ ಸಮಯದಲ್ಲೇ ಯಾರೋ ಚಪ್ಪಲಿ ಎಸೆದಿದ್ದಾರೆ. ಆದರೆ, ಅವರಿಗೆ ಅದು ಬಿದ್ದಿಲ್ಲ.
ಸಹಜ ಸಾವಲ್ಲ
ರಾಜಕಾರಣಿ ವಿಜಯಕಾಂತ್ (Vijayakanth) ಅವರದ್ದು ಸಹಜವಾವಲ್ಲ, ಅದೊಂದು ಕೊಲೆ (Murder) ಎಂದು ಮಲಯಾಳಂನ ಖ್ಯಾತ ಸಿನಿಮಾ ನಿರ್ದೇಶಕ ಅಲ್ಪೋನ್ಸ್ ಪುತ್ರೆನ್ (Alphonse Puthren) ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಂತೆ ಅವರು ಇನ್ಸ್ಟಾದ ಸ್ಟೋರಿ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ತನ್ನ ಆತಂಕವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಲ್ಪೋನ್, ರಾಜಕಾರಣಿ ಉದಯನಿಧಿ ಸ್ಟಾಲಿನ್ ಅವರಿಗೆ ತನಿಖೆ ನಡೆಸುವಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ. ಜೊತೆಗೆ ಜಯಲಲಿತಾ ಕೊಂದವರು ಯಾರೆಂದು ತಾವು ಕೇಳಿರುವುದಾಗಿಯೂ ತಿಳಿಸಿದ್ದಾರೆ.