ಖ್ಯಾತ ನಟ ನಾಸರ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಟಾಲಿವುಡ್ ಚಿತ್ರರಂಗದಲ್ಲಿ ಖ್ಯಾತಿ ಘಳಿಸಿರುವ ನಾಸರ್ ಕನ್ನಡ ಸಿನಿಮಾಗಳಲ್ಲಿಯೂ ನಟಿಸೈ ಸೈ ಎನಿಸಿಕೊಂಡಿದ್ದಾರೆ. ನಾಸರ್ ಅವರ ಮಗ 2014ರಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದು ಈ ವೇಳೆ ಎರಡು ವಾರಗಳ ಕಾಲ ಕೋಮದಲ್ಲಿ ಇದ್ದರು. ಕೋಮಾದಿಂದ ಹೊರ ಬರುತ್ತಿದ್ದಂತೆ ದಳಪತಿ ವಿಜಯ್ ಹೆಸರನ್ನು ಹೇಳಿದ್ದನು ಎಂದು ನಾಸರ್ ಹೇಳಿದ್ದಾರೆ.
ಮದನ್ ಗೌರಿ ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಾಸರ್, ‘ನನ್ನ ಮಗನಿಗೆ ಅಪಘಾತ ಆಯಿತು. 14 ದಿನ ಆತ ಕೋಮಾದಲ್ಲಿ ಇದ್ದ. ಆತನಿಗೆ ಎಚ್ಚರ ಬಂದಾಗ ಅಪ್ಪ ಅಥವಾ ಅಮ್ಮ ಹೇಳಿಲ್ಲ. ಅವನು ವಿಜಯ್ ಹೆಸರನ್ನು ಕರೆದ’ ಎಂದಿದ್ದಾರೆ.
ಆತನ ಗೆಳೆಯನ ಹೆಸರು ವಿಜಯ್ ಕುಮಾರ್ ಆಗಿತ್ತು. ಆತನೂ ಅಪಘಾತದಲ್ಲಿ ಇದ್ದ. ಆತನ ಹೆಸರು ನೆನಪಿದೆ ಎಂದು ಕುಟುಂಬದವರು ಖುಷಿಪಟ್ಟರು. ಆದರೆ, ಫೈಜಲ್ ಗೆ ವಿಜಯ್ ನನ್ನು ಗುರಿತಿಸೋಕೆ ಸಾಧ್ಯವೇ ಆಗಿಲ್ಲ. ಇದು ಅವರ ಕುಟುಂಬಕ್ಕೆ ಸಾಕಷ್ಟು ಗೊಂದಲ ಮೂಡಿಸಿತ್ತು.
ಆ ಬಳಿಕ ನಾಸರ್ ಅವರಿಗೆ ಮಗ ಹೇಳುತ್ತಿರುವುದು ನಟ ದಳಪತಿ ವಿಜಯ್ ಹೆಸರು ಅನ್ನೋದು ಗೊತ್ತಾಯಿತು. ಆ ಬಳಿಕ ವಿಜಯ್ ಸಿನಿಮಾಗಳನ್ನು ತೋರಿಸೋಕೆ ಆರಂಭಿಸಲಾಯಿತು. ವಿಜಯ್ ನಟನೆಯ ಸಿನಿಮಾಗಳ ಹಾಡುಗಳನ್ನು ಕೇಳಿಸಲಾಯಿತು. ವಿಶೇಷ ಎಂದರೆ ವಿಜಯ್ ಕೂಡ ನಾಸರ್ ಮಗನ ಚೇತರಿಕೆಗೆ ಕಾರಣ ಆದರು. ಹಲವು ಬಾರಿ ಫೈಜಲ್ ದಾಖಲಾಗಿದ್ದು ಆಸ್ಪತ್ರೆಗೆ ಭೇಟಿ ನೀಡಿದ್ದರು. ‘ನನ್ನ ಹಾಗೂ ಫೈಜಲ್ ಬಾಳಲ್ಲಿ ವಿಜಯ್ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ’ ಎಂದು ನಾಸರ್ ಭಾವುಕರಾದರು.