ಬಾಲಿವುಡ್ ನಟ ಸುನೀಲ್ ಶೆಟ್ಟಿ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು ಸುನೀಲ್ ಶೆಟ್ಟಿ ಪಕ್ಕೆಲುಬಿಗೆ ಗಾಯ ಆಗಿದೆ. ಕೂಡಲೇ ಶೂಟಿಂಗ್ ಸ್ಥಳಕ್ಕೆ ವೈದ್ಯರನ್ನು ಕರೆಸಲಾಗಿದೆ. ಗಾಯದ ತೀವ್ರತೆ ಎಷ್ಟಿದೆ ಎಂಬುದನ್ನು ತಿಳಿಯಲು ಚಿತ್ರೀಕರಣದ ಸ್ಥಳದಲ್ಲೇ ಎಕ್ಸ್ ರೇ ಕೂಡ ಮಾಡಲಾಗಿದೆ.
ಸುನೀಲ್ ಶೆಟ್ಟಿ ‘ಹಂಟರ್’ ವೆಬ್ ಸರಣಿಯ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದು ಇದರ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಆ್ಯಕ್ಷನ್ ಸನ್ನಿವೇಶಗಳ ಸಮಯದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ‘ಹಂಟರ್’ ತಂಡ ಕೂಡ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೂ ಕೂಡ ಆಕಸ್ಮಿಕವಾಗಿ ಸುನೀಲ್ ಶೆಟ್ಟಿ ಅವರಿಗೆ ಗಾಯವಾಗಿದೆ.
ಸದ್ಯ ಸುನೀಲ್ ಶೆಟ್ಟಿ ಅವರಿಗೆ 63 ವರ್ಷ ವಯಸ್ಸು. ಹಾಗಾಗಿ ಗಾಯದ ಬಗ್ಗೆ ಅವರು ನಿರ್ಲಕ್ಷ್ಯ ಮಾಡುವಂತಿಲ್ಲ. ‘ಹಂಟರ್’ ಶೂಟಿಂಗ್ ವೇಳೆ ಅವರಿಗೆ ಪೆಟ್ಟಾಗುತ್ತಿದ್ದಂತಯೇ ವೈದ್ಯರು ಎಕ್ಸ್ ರೇ ಮಷಿನ್ ಹಿಡಿದುಕೊಂಡು ಚಿತ್ರೀಕರಣದ ಸ್ಥಳಕ್ಕೆ ಆಗಮಿಸಿದ್ದಾಗಿ ವರದಿ ಆಗಿದೆ. ಅವರ ಹೆಲ್ತ್ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಸುನೀಲ್ ಶೆಟ್ಟಿ ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಪ್ರಾರ್ಥಿಸಿದ್ದಾರೆ.
ವರದಿಗಳ ಪ್ರಕಾರ, ಸುನೀಲ್ ಶೆಟ್ಟಿ ಅವರಿಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಒಂದಷ್ಟು ದಿನಗಳ ಕಾಲ ಶೂಟಿಂಗ್ಗೆ ಬ್ರೇಕ್ ನೀಡಲು ಸುನೀಲ್ ಶೆಟ್ಟಿ ನಿರ್ಧರಿಸಿದ್ದಾರೆ. ಸಿನಿಮಾದಲ್ಲಿ ಮಿಂಚಿದ ಹಲವು ಸ್ಟಾರ್ ಕಲಾವಿದರು ವೆಬ್ ಸರಣಿಯಲ್ಲೂ ಹೆಸರು ಮಾಡಿದ್ದಾರೆ. ಆ ಸಾಲಿಗೆ ಸುನೀಲ್ ಶೆಟ್ಟಿ ಕೂಡ ಸೇರ್ಪಡೆ ಆಗುತ್ತಿದ್ದಾರೆ. ಈ ಮೊದಲು ಅವರು ‘ಧಾರಾವಿ ಬ್ಯಾಂಕ್’ ವೆಬ್ ಸಿರೀಸ್ನಲ್ಲಿ ನಟಿಸಿದ್ದರು. ಸದ್ಯ ‘ಹಂಟರ್’ ವೆಬ್ ಸರಣಿಯಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.