ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬ್ಯಾಕ್ ಟು ಬ್ಯಾಕ್ ಚಿತ್ರ ಒಪ್ಪಿಕೊಂಡಿದ್ದಾರೆ. ಇದರ ಮಧ್ಯೆ ಶಸ್ತ್ರ ಚಿಕಿತ್ಸೆ ಕೂಡ ನಡೆದಿದೆ. ಶಿವಣ್ಣ ಕ್ಯಾನ್ಸರ್ ಫ್ರೀ ಆಗಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಶಿವಣ್ಣ ಫುಲ್ ಆಯಕ್ಟೀವ್ ಆಗಿದ್ದಾರೆ. ಹೌದು ಶಿವರಾಜ್ಕುಮಾರ್ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಮಿಯಾಮಿಯಲ್ಲಿ ಅವರು ಸುತ್ತಾಟ ನಡೆಸುತ್ತಿದ್ದಾರೆ. ಮುಂದಿನ ಕೆಲ ದಿನಗಳನ್ನು ಅವರು ಅಲ್ಲಿಯೇ ಕಳೆಯಲಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಅವರು ಮರಳಲಿದ್ದಾರೆ.
ಸದ್ಯ ಶಿವರಾಜ್ಕುಮಾರ್ ಅವರು ಅಮೆರಿಕದಲ್ಲೇ ಇದ್ದಾರೆ. ಜನವರಿ 24ರವರೆಗೆ ಅಲ್ಲಿಯೇ ಇರಲಿದ್ದಾರೆ. ಈಗ ಅವರು ಚೇತರಿಕೆ ಕಾಣುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಇರುವ ಪ್ರದೇಶಗಳನ್ನು ಅವರು ವೀಕ್ಷಿಸುತ್ತಾ ಇದ್ದಾರೆ. ಸಮುದ್ರ ತೀರದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಶಿವರಾಜ್ಕುಮಾರ್ ಅವರ ಲುಕ್ ಗಮನ ಸೆಳೆದಿದೆ. ಅವರು ಮೊದಲಿನ ಎನರ್ಜಿಯನ್ನು ಮತ್ತೆ ತಂದುಕೊಂಡಂತೆ ಕಾಣುತ್ತಿದೆ.
ಶಿವರಾಜ್ಕುಮಾರ್ ಹಾಗೂ ಗೀತಾ ಅವರು ಅಮೆರಿಕಕ್ಕೆ ತೆರಳುವುದಕ್ಕೂ ಮೊದಲು ತಿರುಪತಿಗೆ ತೆರಳಿದ್ದರು. ಅಲ್ಲಿ ಅವರು ಕುಟುಂಬದ ಜೊತೆ ತೆರಳಿ ಮುಡಿಕೊಟ್ಟಿದ್ದರು. ಈಗ ಶಿವರಾಜ್ಕುಮಾರ್ ಅವರ ತಲೆಯಲ್ಲಿ ಕೂದಲು ಹುಟ್ಟುತ್ತಿದೆ. ಶಿವರಾಜ್ಕುಮಾರ್ ಕಳೆದ ವರ್ಷ ಡಿಸೆಂಬರ್ 18ರಂದು ಅಮೆರಿಕಕ್ಕೆ ತೆರಳಿದರು. ಡಿಸೆಂಬರ್ 24ರಂದು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗದರು. ಆ ಬಳಿಕ ಅವರು ಕೆಲವು ದಿನ ಆಸ್ಪತ್ರೆಯಲ್ಲೇ ಇದ್ದು ಚೇತರಿಕೆ ಕಂಡಿದ್ದಾರೆ.