ಅಮೆರಿಕ: ಕರುನಾಡ ಚಕ್ರವರ್ತಿ, ನಟ ಡಾ.ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಆದರೆ ಅಮೆರಿಕದಲ್ಲಿ ಶಿವಣ್ಣ ಹೇಗಿದ್ದಾರೆ ಎನ್ನುವುದು ಅವರ ಅಭಿಮಾನಿಗಳನ್ನ ಕಾಡುತ್ತಿತ್ತು. ಇದೀಗ ಅಮೆರಿಕದಲ್ಲಿ ಸರ್ಜರಿ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಟ ಶಿವಣ್ಣಗೆ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ನಡೆದಿತ್ತು. ಯಶಸ್ವಿ ಸರ್ಜರಿ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ. ಸರ್ಜರಿ ಬಳಿಕ ಎರಡು ಚೆಕಪ್ ಬಾಕಿ ಇದ್ದು, ನಂತರ ಸಂಪೂರ್ಣ ಗುಣಮುಖರಾಗಿ ಜ.24ರ ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.
PM Surya Ghar Yojana: ನಿಮ್ಮ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ಬೇಕಾ..? ಹಾಕಿದ್ರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾದ ಶಿವಣ್ಣ ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ್ದರು. ಕ್ಯಾನ್ಸರ್ನಿಂದ ಗುಣಮುಖರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಶೀಘ್ರವೇ ಬೆಂಗಳೂರಿಗೆ ವಾಪಸ್ ಆಗಿ ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು.