ರಾಯಚೂರು:- ನಟ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಕೇಸ್ ಗೆ ಸಂಬಧಪಟ್ಟಂತೆ ನಟಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಕೇಳಿ ಭಾರೀ ಶಾಕ್ ಆಗಿದೆ. ಅವರು ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದರು.
ರಾಯಚೂರಿಗೆ ಬಂದಿರುವುದು ನಾನು ನಮ್ಮ ಊರಿಗೆ ಬಂದಂತೆ ಆಗಿದೆ. ನನ್ನ ಕನ್ನಡದ ಮುಂದಿನ ಸಿನಿಮಾ ಡೆವಿಲ್ ಹಾಗೂ ಕೆಡಿ ಬರುತ್ತಿವೆ. ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಬಗ್ಗೆ ನನಗೆ ಭಾರೀ ಕುತೂಹಲ ಇದೆ. ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಜೊತೆಗೆ ನಟಿಸಿದ್ದಾರೆ ಎಂದರು.
ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನೋಡಲು ರಾಯಚೂರಿನಲ್ಲಿ ಜನ ಮುಗಿಬಿದ್ದಿದ್ದರು. ನಗರದ ಸ್ಟೇಷನ್ ರಸ್ತೆಯಲ್ಲಿ ಜನರ ನೂಕುನುಗ್ಗಲಿನಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿತ್ತು.