ಮೈಸೂರು: ಬಹುಭಾಷಾ ನಟ ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ ವಯೋಸಹಜ ಕಾಯಿಲೆಯಿಂದ ಜು.9ರಂದು ವಿಧಿವಶರಾಗಿದ್ದಾರೆ. ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಹೋದರರ ಜೊತೆ ಪ್ರಭುದೇವ ಚೆನ್ನೈನಿಂದ ಮೈಸೂರಿಗೆ ಆಗಮಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಭುದೇವ ಅಜ್ಜಿ 97ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
Ration Card: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್! BIG ಅಪ್ಡೇಟ್ ಇಲ್ಲಿದೆ
ಜು.9ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೂರ ಗ್ರಾಮದಲ್ಲಿ ಅಜ್ಜಿ ನಿಧನರಾಗಿದ್ದಾರೆ. ದೂರ ಗ್ರಾಮದಲ್ಲಿ ಇಂದು ಸಂಜೆ ಅಜ್ಜಿ ಪುಟ್ಟಮ್ಮಣ್ಣಿ ಅಂತ್ಯಕ್ರಿಯೆ ನಡೆಯಲಿದೆ. ಅಂದಹಾಗೆ, ಪುಟ್ಟಮ್ಮಣ್ಣಿ ಅವರು ಪ್ರಭುದೇವ ತಾಯಿ ಮಹಾದೇವಮ್ಮ ಅವರ ತಾಯಿ. ಅವರ ನಿಧನದಿಂದ ಕುಟುಂಬಕ್ಕೆ ಆಘಾತವಾಗಿದೆ.