ಟಗರು ಪಲ್ಯ ಖ್ಯಾತಿಯ ನಟ ನಾಗಭೂಷಣ್ (Nagabhushan) ಇಂದು ಹೊಸ ಜೀವನಕ್ಕೆ ಕಾಲಿಟ್ಟಿರು. ಬಹುಕಾಲದ ಗೆಳತಿ, ನಟಿ ಪೂಜಾ ಪ್ರಕಾಶ್ (Pooja Prakash) ಜೊತೆ ಇಂದು ಬೆಳಗಾವಿಯಲ್ಲಿ ಅವರು ಮದುವೆ (marriage) ಆಗಿದ್ದು, ಡಾಲಿ ಧನಂಜಯ್, ವಾಸುಕಿ ವೈಭವ್, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಈ ಮದುವೆಯಲ್ಲಿ ಗೆಳೆಯ ನಾಗಭೂಷಣ್ ಅವರಿಗಾಗಿಯೇ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ ಸೊಗಸಾದ ಗೀತೆಗಳನ್ನು ಹಾಡಿದ್ದಾರೆ. ಜೊತೆಗೆ ಹೊಸ ಜೀವನಕ್ಕೆ ವಾಸುಕಿ ದಂಪತಿ ಸಮೇತ ಶುಭ ಹಾರೈಸಿದ್ದಾರೆ.
ಟಗರು ಪಲ್ಯ ಸೇರಿದಂತೆ ಅನೇಕ ಚಿತ್ರಗಳಿಗೆ ನಾಯಕನಾಗಿ ನಟಿಸಿರುವ ನಾಗಭೂಷಣ್, ನಾನಾ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಇವರ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ.
ನಾಗಭೂಷಣ್ ಮದುವೆ ಆಗುತ್ತಿರುವ ಪೂಜಾ ಪ್ರಕಾಶ್ ಚಿತ್ರಕಲೆ ಮತ್ತು ಗ್ರಾಫಿಕ್ಸ್ ಡಿಸೈನ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದು ಬೆಳಗಾವಿಯಲ್ಲಿ ಇವರ ವಿವಾಹ ನಡೆದಿದ್ದು, ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.