ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಮಹದೇವಪುರ-ಐಟಿಪಿಎಲ್ ರಸ್ತೆಯ ಫೀನಿಕ್ಸ್ ಮಾಲ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣವಾಗಿದ್ದು, ಪ್ರತಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಸಾಟಿಯಿಲ್ಲದ ಶಾಪಿಂಗ್ ಡೀಲ್ ಗಳನ್ನು ನೀಡುತ್ತ ಬಂದಿದ್ದು, ಈ ಭಾರಿ ಸಹ ಜೂನ್-ಜುಲೈ ತಿಂಗಳಲ್ಲಿ ‘ಫಿನಿಕ್ಸ್ ಶಾಪಿಂಗ್ ಪೆಸ್ಟಿವಲ್’ ಅರಂಭಿಸಿದ್ದು,
ಈ 2024 ರ ಫೀನಿಕ್ಸ್ ಶಾಪಿಂಗ್ ಪೆಸ್ಟಿವಲ್ ಗೆ ಖ್ಯಾತ ನಟ ಕಮಲಹಾಸನ್ ಪುತ್ರಿ ಅಕ್ಷರ ಹಾಸನ್ ಚಾಲನೆ ನೀಡಿದರು.. ಶಾಪಿಂಗ್ ಡೀಲ್ಗಳು, ಮನರಂಜನೆ, ರುಚಿಕರ ತಿನಿಸು ಜೊತೆಗೆ ಬಟ್ಟೆ, ಗೃಹ ಅಲಂಕಾರ, ಚಿನ್ನಾಭರಣ ಸೇರಿದಂತೆ ಅನೇಕ ಬಗೆಯ ಬ್ರಾಂಡ್ಗಳ ಮೇಲೆ 40 % ರಿಂದ 60% ರಿಯಾಯಿತಿ (ಡಿಸ್ಕೌಂಡ್) ನೀಡಿದ್ದು,
![Demo](https://ainlivenews.com/wp-content/uploads/2023/12/spoorthi-1.jpg)
ಇದರ ಸದುಪಯೋಗ ಪಡೆದುಕೊಂಡು 10 ಸಾವಿಕ್ಕು ಅಧಿಕ ಶಾಪಿಂಗ್ ಮಾಡಿದರೆ, ಲಕ್ಕಿ ಡ್ರಾ ಕೂಪನ್ ವಿಜೇತರಿಗೆ ದುಬಾರಿ ಬೆಲೆಯ ಕಾರ್ ಸೇರಿದಂತೆ, ಅಂತರಾಷ್ಟ್ರೀಯ ಹಾಲಿಡೇ ವೋಚರ್, ಚಿನ್ನದ ನಾಣ್ಯ, ಮೊಬೈಲ್ ಪೋನ್, ಟಿವಿ, ಫ್ರಿಜ್ ಸೇರಿದಂತೆ ಕೋಟಿಗಟ್ಟಲೆ ಮೌಲ್ಯದ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಫಿನಿಕ್ಸ್ ಶಾಪಿಂಗ್ ಪೆಸ್ಟಿವಲ್ ಕುರಿತು ನಟಿ ಅಕ್ಷರ ಹಾಸನ್ ಹಾಗೂ ಶಾಪಿಂಗ್ ಪ್ರಿಯರು ತಮ್ಮ ಅನುಭವ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು..
![](https://ainlivenews.com/wp-content/uploads/2024/01/Ad-Banner-copy-scaled.jpg)