ಬೆಂಗಳೂರು: ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣವು ಮತ್ತೆ ಮುನ್ನೆಲೆಗೆ ಬಂದಿದೆ..ಹೈಕೋರ್ಟ್ ನಲ್ಲಿ ಜಾಮೀನು ಪಡೆದಿದ್ದ ದರ್ಶನ್ ಸುಪ್ರಿಂ ಕೋರ್ಟ್ ನಲ್ಲೂ ಗೆಲುವು ಪಡೆಯೋಕೆ ತಯಾರಿ ನಡೆಸಿದ್ದಾರೆ..ಇದಕ್ಕಾಗಿ ಯಾವ ವಕೀಲರನ್ನ ನೇಮಕ ಮಾಡಲು ಮುಂದಾಗಿದ್ದಾರೆ ಗೊತ್ತಾ..ಈ ಸ್ಟೋರಿ ನೋಡಿ…
ಯೆಸ್..ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ರು..ಸದ್ಯ ಆರೋಪಿಗಳಿಗೆ ನೋಟೀಸ್ ಬೆನ್ನಲ್ಲೇ ದರ್ಶನ್ ಮತ್ತೊಂದು ಗೆಲುವು ಪಡೆಯಲು ಸಾಕಷ್ಟು ಸಿದ್ದತೆ ನಡೆಸಿದ್ದಾರೆ..ಹೌದು, ದರ್ಶನ್ ಇಂದ ಸುಪ್ರೀಂ ನಲ್ಲಿ ವಾದಿಸಲು ಹಿರಿಯ ನುರಿತ ವಕೀಲರ ನೇಮಕ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗಿದೆ..
ನಿಮಗೆ ಗೊತ್ತೆ..? ಇಲ್ಲಿ ಒಡಹುಟ್ಟಿದವರು, ತಾಯಿ -ಮಗ ಮತ್ತು ತಂದೆ- ಮಗಳ ಜೊತೆ ದೈಹಿಕ ಸಂಬಂಧ ಇರುತ್ತೆ..!
ಖ್ಯಾತ ಹಿರಿಯ ಸುಪ್ರೀಂ ಕೋರ್ಟ್ ವಕೀಲರಾಗಿರೋ ಕಪಿಲ್ ಸಿಬಲ್ ರನ್ನ ದರ್ಶನ್ ಕುಟುಂಬ ಭೇಟಿ ಮಾಡಿದ್ಯಂತೆ..ಕೇಸ್ ವಿಚಾರವಾಗಿ ದರ್ಶನ್ ಪರ ವಕೀಲರು ಹಾಗೂ ಕುಟುಂಬಸ್ಥರು ವಾದ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ..ಈಗಾಗ್ಲೇ ಈ ಹಿಂದಿನ ಹೈಕೋರ್ಟ್ ವಾದ ಪ್ರತಿವಾದ , ಕೇಸ್ ಹಿಸ್ಟರಿ ಡೀಟೈಲ್ಸ್ ಕೂಡಾ ನೀಡಲಾಗಿದೆ ಎನ್ನಲಾಗಿದೆ..ಇನ್ನು ಮಾರ್ಚ್ 18 ರಂದು ಸುಪ್ರೀಂ ನಲ್ಲಿ ಅರ್ಜಿ ವಿಚಾರಣೆಗೆ ಬರಲಿದ್ದು,ಅಂದು ವಕೀಲ ಕಪಿಲ್ ಸಿಬಲ್ ವಾದಿಸಲಿದ್ದಾರೆ ಎನ್ನಲಾಗ್ತಿದೆ..
ಇನ್ನು ಹೈಕೋರ್ಟ್ ನಲ್ಲಿ ಗೆಲುವು ಕಂಡುಕೊಂಡಂತೆ ಸುಪ್ರೀಂ ನಲ್ಲೂ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಾಗ್ತಿದೆ..ಹಾಗೇ ಇನ್ನಷ್ಟು ದಾಖಲೆಗಳನ್ನು ತರ್ಜುಮೆ ಮಾಡ್ತಿರೋ ದರ್ಶನ್ ಪರ ವಲೀಲರು ವಿಚಾರಣೆ ದಿನ ತೆಗೆದುಕೊಂಡು ಹೋಗಲಿದ್ದಾರೆ..ಅಲ್ದೆ ಉಳಿದ ಆರೋಪಿಗಳ ಪರ ವಕೀಲರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನಷ್ಟೇ ಅಧಿಕೃತ ವಾಗಬೇಕಿದೆ.