ಡಬಕ್ ಮರ್ಡರ್ ಹಾಗೂ ರೇಪ್ ಕೇಸ್ ನಲ್ಲಿ ಜೈಲು ಸೇರಿ ಬಳಿಕ ದುನಿಯಾ ವಿಜಯ್ ಸಹಾಯದಿಂದ ಹೊರ ಬಂದಿದ್ದ ಸುರೇಶ್ ಎಂಬಾತ ಇದೀಗ ಮತ್ತೆ ಜೋಡಿ ಕೊಲೆ ಮಾಡಿದ್ದಾನೆ. ಈ ಹಿಂದೆ ನಟ ದುನಿಯಾ ವಿಜಯ್ ಅವರೇ ಹಣ ಕೊಟ್ಟು ಸುರೇಶ್ನ ಹೊರಕ್ಕೆ ಕರೆ ತಂದಿದ್ದರು. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕೊಲೆ ಹಾಗೂ ರೇಪ್ ಕೇಸ್ನಲ್ಲಿ ಸುರೇಶ್ 10 ವರ್ಷ ಶಿಕ್ಷೆ ಅನುಭವಿಸಿದ್ದ. ಈತನಿಗೆ ಶ್ಯೂರಿಟಿ ಹಣ ನೀಡಿ ಹೊರಕ್ಕೆ ಕರೆತರಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಒಂದಷ್ಟು ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ದುನಿಯಾ ವಿಜಯ್ ಶ್ಯೂರಿಟಿ ಹಣ ಕೊಟ್ಟಿದ್ದರು. ಈ ವೇಳೆ ಸುರೇಶ್ಗೂ ಮೂರು ಲಕ್ಷ ರೂಪಾಯಿ ಶ್ಯೂರಿಟಿ ಹಣ ನೀಡಿದ್ದರು.
ಜೈಲಿಂದ ಬಿಡುಗಡೆ ಆದ ಬಳಿಕ ಸುರೇಶ್ ಬದಲಾಗಿದ್ದ. ಮಾರ್ಕೆಟ್ನಲ್ಲಿ ಕೊತ್ತುಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಾ ಇದ್ದ. ಸುರೇಶ್ ಸಂಬಂಧಿಯಿಂದ ಶೆಡ್ನಲ್ಲಿ ಕೆಲಸ ಪಡೆದುಕೊಂಡಿದ್ದ. ಆದರೆ, ಈಗ ಆತ ಕೊಲೆ ಮಾಡಿ ಮತ್ತೆ ಜೈಲು ಸೇರುವಂತೆ ಆಗಿದೆ.
ನವೆಂಬರ್ 8ರ ರಾತ್ರಿ ಬೆಂಗಳೂರಿನ ಹೊರವಲಯದಲ್ಲಿ ಸುರೇಶ್ ಜೋಡಿ ಕೊಲೆ ಮಾಡಿದ್ದ. ಎಸ್ಆರ್ಎಸ್ ಟ್ರಾವೆಲ್ಸ್ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಕೊಲೆಯಾದವರು. ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊಲೆಗಾರ’ ಎಂದು ಸುರೇಶ್ಗೆ ಹೀಯಾಳಿಸಿದ್ದರು. ಇದರಿಂದ ಸಿಟ್ಟಾದ ಸುರೇಶ್ ಕೊಲೆಗೈದಿದ್ದಾನೆ ಎನ್ನಲಾಗಿದೆ.