ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಹೊಸವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಇದೇ ವೇಳೆ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಹೊಸ ವರ್ಷವನ್ನು ಕೇಕ್ ಕಟ್ ಮಾಡುವ ಮೂಲಕ ವೆಲ್ ಕಮ್ ಮಾಡಿದ್ದಾರೆ.
ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ಸಂಭ್ರಮದಲ್ಲಿದ್ದಾರೆ. ಹಲವು ಗಣ್ಯರನ್ನು ಭೇಟಿಯಾಗಿ ಮದುವೆ ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ. ಅಲ್ಲದೆ ಕಳೆದ ನಾಲ್ಕೈದು ದಿನಗಳ ಹಿಂದೆ ಡಾಲಿ ಧನಂಜಯ್ ಭಾವೀ ಪತ್ನಿ ಧನ್ಯತಾ ಜೊತೆ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದರು.ಜೊತೆಗೆ ಸುತ್ತೂರು ಶ್ರೀ ಮಠಕ್ಕೆ ಭೇಟಿ ನೀಡಿದ್ದಾರೆ.
ಮೈಸೂರಿನಿಂದ ವರುಣಾ ಮಾರ್ಗವಾಗಿ ಸುತ್ತೂರು ಪ್ರಯಾಣ ಮಾಡಿದ್ದು, ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಪಡೆದಿದ್ದರು. ಫೆಬ್ರವರಿ 15-16 ರಂದು ಮೈಸೂರಿನಲ್ಲಿ ಧನಂಜಯ್ ಮತ್ತು ಧನ್ಯತಾ ಅದ್ಧೂರಿ ಮದುವೆ ನಡೆಯಲಿದ್ದು ಮದುವೆಗೆ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ.
ಡಾಲಿ ಧನಂಜಯ್ ಹಾಗೂ ಧನ್ಯತಾ ನಿಶ್ಚಿತಾರ್ಥ ಶಾಸ್ತ್ರದ ಸಂಭ್ರಮ ಅರಸಿಕೆರೆಯಲ್ಲಿಯೇ ನಡೆದಿತ್ತು. ಡಾಲಿ ಧನಂಜಯ್ ಅವರ ಕಾಳೇನಹಳ್ಳಿಯ ಮನೆಯಲ್ಲಿಯೇ ಈ ಎಲ್ಲ ಶಾಸ್ತ್ರಗಳು ನಡೆಯತ್ತಿವೆ. ಡಾಲಿ ಧನಂಜಯ್ ಹಾಗೂ ಧನತ್ಯಾ ಲಗ್ನಪತ್ರಿಕೆ ಬರೆಸೋ ಶಾಸ್ತ್ರ ಮಾಡಲಾಗಿದೆ. ಇದರೊಟ್ಟಿಗೆ ಎಂಗೇಜ್ಮೆಂಟ್ ಕೂಡ ಆಗಿದೆ. ಎರಡೂ ಸಂಭ್ರಮವನ್ನ ಕ್ಯಾಪ್ಚರ್ ಮಾಡಲಾಗಿತ್ತು . ಫೋಟೋಗಳ ವೈರಲ್ ಆಗಿತ್ತು. ಇದೀಗ ಹೊಸ ವರ್ಷವನ್ನು ಜೋಡಿ ಸಖತ್ ಆಗಿ ಸೆಲೆಬ್ರೆಟ್ ಮಾಡಿದೆ.