ನಟ ಡಾಲಿ ಧನಂಜಯ್ ಅವರು ಡಾ.ಧನ್ಯತಾ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಮೈಸೂರಿನಲ್ಲಿ ಫೆಬ್ರವರಿ 16ರಂದು ಧನಂಜಯ್ ಮದುವೆ ನಡೆಯಲಿದ್ದು ಈಗಾಗಲೇ ಹಲವರಿಗೆ ಆಹ್ವಾನ ನೀಡಿದ್ದಾರೆ. ಧನ್ಯತಾ ಅವರು ವೃತ್ತಿಯಲ್ಲಿ ವೈದ್ಯೆ. ಧನಂಜಯ್ ಬಾಳಲ್ಲಿ ಡಾಕ್ಟರ್ ಆಗಮನ ಆಗಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಧನಂಜಯ್ ಅಭಿಮಾನಿಗಳಿಗೆ ಆಮಂತ್ರಣ ನೀಡುತ್ತಿರುವ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಧನ್ಯತಾ ಅವರಿಗೆ ಡಿಫರೆಂಟ್ ಆಗಿರೋ ಉಂಗುರ ಹಾಕಿದ್ದಾರೆ.
ಧನಂಜಯ್ ಅವರು ಇಷ್ಟು ವರ್ಷ ಬ್ಯಾಚಲುರ್ ಆಗಿದ್ದರು. ಈಗ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಧನ್ಯತಾ ಹಾಗೂ ಧನಂಜಯ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಧನಂಜಯ್ ವಿವಾಹ ಆಗುತ್ತಿದ್ದಾರೆ. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈಗ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ.
ಧನಂಜಯ್ ಅವರು ಇಷ್ಟು ದಿನ ಬ್ಯಾಚುಲರ್ ಆಗಿದ್ದರು. ಈಗ ಹಂಚಿಕೊಂಡಿರೋ ವಿಡಿಯೋದಲ್ಲಿ ಇದನ್ನು ತೋರಿಸಲಾಗಿದೆ. ಧನಂಜಯ್ ಆಪ್ತ ನಾಗಭೂಷಣ್ ಧ್ವನಿಯಲ್ಲಿ ವಿಡಿಯೋ ಮೂಡಿ ಬಂದಿದೆ. ಧನಂಜಯ್ ಬ್ಯಾಚುಲರ್ ಜೀವನ ಹೇಗಿತ್ತು ಎಂಬುದನ್ನು ವಿವರಿಸಿ, ನಂತರ ಅವರ ಬಾಳಲ್ಲಿ ಧನ್ಯತಾ ಎಂಟ್ರಿ ಕೊಟ್ಟರು ಎಂಬ ರೀತಿಯಲ್ಲಿ ತೋರಿಸಲಾಗಿದೆ. ಆ ಬಳಿಕ ಧನಂಜಯ್ ಅವರು ಜೀವನದಲ್ಲಿ ಸಂಗಾತಿ ಇದ್ದೇ ಇದೆ ಎಂದು ವಾದಿಸುತ್ತಾರೆ. ಇದರ ಜೊತೆಗೆ ಧನ್ಯತಾಗೆ ಉಂಗುರ ಹಾಕಿ ಗಮನ ಸೆಳೆಯುತ್ತಾರೆ.
ಡಾಲಿ ಧನಂಜಯ್ ಅವರು ಚಿತ್ರರಂಗದಲ್ಲಿ ಇರುವಾಗ ಧನ್ಯತಾ ಅವರು ಒಮ್ಮೆ ಅಭಿಮಾನಿಯಾಗಿ ಭೇಟಿ ಮಾಡಿದ್ದರು. ಆ ಬಳಿಕ ಧನಂಜಯ್ ಅವರನ್ನು ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿದರು ಧನ್ಯತಾ. ಸಿನಿಮಾ ಹಿಟ್ ಆದಾಗ ಅವರು ವಿಶ್ ಮಾಡುತ್ತಿದ್ದರಂತೆ. ಆ ಬಳಿಕ ಇಬ್ಬರೂ ಭೇಟಿ ಮಾಡಿ ಸುತ್ತಾಟ ನಡೆಸಿದರು. ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿವಾಹಕ್ಕೆ ಕನ್ನಡ ಚಿತ್ರರಂಗದವರಿಗೆ ಮಾತ್ರ ಅಲ್ಲದೆ, ‘ಪುಷ್ಪ 2’ ಚಿತ್ರದ ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್ ಅವರಿಗೂ ಆಹ್ವಾನ ನೀಡಿದ್ದಾರೆ.