ಮಿರಾಮಾರ್ ಫಿಲ್ಮ್ಸ್ ಮತ್ತು ಫ್ರೈಡೇ ಫಿಲಂ ಹೌಸ್ ಸಹಯೋಗದಲ್ಲಿ ನಿರ್ಮಾಣಗೊಂಡ ಹಾಗೂ ಕೆ.ಎಂ.ಚೈತನ್ಯ ನಿರ್ದೇಶನದ “ಅಬ್ಬಬ್ಬ” ಚಿತ್ರದ ಟ್ರೇಲರ್ ಅನ್ನು ನಟ ಡಾಲಿ ಧನಂಜಯ್ ಇಂದು ಲೂಲೂ ಮಾಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಇದೇ ತಿಂಗಳು – ಫೆಬ್ರವರಿ 16ಕ್ಕೆ ಈ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಚಿತ್ರದಲ್ಲಿ ಲಿಖಿತ್ ಶೆಟ್ಟಿ, ಅಮೃತಾ ಐಯ್ಯಂಗಾರ್, ಅಜಯ್ ರಾಜ್, ಧನರಾಜ್ ಆಚಾರ್, ತಾಂಡವ್ ರಾಮ್, ಶರತ್ ಲೋಹಿತಾಶ್ವ ಹಾಗು ವಿಜಯ್ ಚೆಂಡೂರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ಹಾಸ್ಯದ ಚಟಾಕಿಯನ್ನು ಹಚ್ಚಲು ಸಜ್ಜಾಗಿದೆ.
ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ಬಿಡುಗಡೆ ಮಾಡಲಿದೆ.