ತಮಿಳು ಚಿತ್ರರಂಗದ ಸ್ಟಾರ್ , ರಜನಿಕಾಂತ್ ಮಾಜಿ ಅಳಿಯ ಧನುಷ್ ಪತ್ನಿ ಐಶ್ವರ್ಯ ರಿಂದ ದೂರವಾಗಿ ಕೆಲ ವರ್ಷಗಳೆ ಕಳೆದಿದೆ. ಇಬ್ಬರು ದೂರ ದೂರವಾಗಿ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಐಶ್ವರ್ಯ ರಜನಿಕಾಂತ್ ನಿರ್ದೇಶದ ರಜನಿಕಾಂತ್ ನಟನೆಯ ಲಾಲ್ ಸಿನಿಮಾ ಇಂದು ರಿಲೀಸ್ ಆಗಿದ್ದು ಧನುಷ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಐಶ್ವರ್ಯಾ ರಜನೀಕಾಂತ್ ನಿರ್ದೇಶನದ ‘ಲಾಲ್ ಸಲಾಂ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಚಿತ್ರದಲ್ಲಿ ರಜನಿಕಾಂತ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ರಜನಿಕಾಂತ್ ತೆರೆಮೇಲೆ ಕಾಣಿಸಿಕೊಂಡಿದ್ದು ಚಿತ್ರಕ್ಕೆ ಬರೋಬ್ಬರಿ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ. ಮಾಜಿ ಮಾವನ ಚಿತ್ರ ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ಧನುಷ್ ಶುಭಾಶಯ ತಿಳಿಸಿದ್ದಾರೆ.
ರಜನಿಕಾಂತ್ ಅವರನ್ನು ಕಂಡರೆ ಧನುಷ್ಗೆ ಅಪಾರ ಗೌರವ ಇದೆ. ಐಶ್ವರ್ಯಾ ಜೊತೆ ವಿಚ್ಛೇದನ ಪಡೆದರೂ ಅವರು ರಜನಿಕಾಂತ್ ಜೊತೆ ಇರುವ ಬಾಂಧವ್ಯವನ್ನು ಕಡಿದುಕೊಂಡಿಲ್ಲ. ಈ ಕಾರಣದಿಂದ ಅವರು ರಜನಿಕಾಂತ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ, ಎಲ್ಲಿಯೂ ಅವರು ಪತ್ನಿ ಐಶ್ವರ್ಯಾ ಹೆಸರನ್ನು ಉಲ್ಲೇಖಿಸಿಲ್ಲ.