ಬೆಂಗಳೂರು:-ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಬೆಂಗಳೂರು ಬಿಟ್ಟು ಮೈಸೂರು ಹೋಗೋಕೆ ನಟ ದರ್ಶನ್ ಕೋರ್ಟ್ ಮೊರೆ ಹೊಗಿದ್ರು.. ಮೈಸೂರಿಗೆ ಯಾಕ್ ಹೋಗ್ಬೇಕು ಅಂತಾ ಕಾರಣ ಕೂಡ ನೀಡಿದ್ರು.. ಕೋರ್ಟ್ ಕೂಡ ದರ್ಶನ್ ಮೈಸೂರಿಗೆ ಹೋಗೋಕೆ ಸಮಯ ನೀಡಿತ್ತು.. ಆದರೇ ಈಗ ಕಂಪ್ಲೀಟ್ ಆಗಿದೆ, ನಟ ದರ್ಶನ್ ಮತ್ತೆ ಬೆಂಗಳೂರಿಗೆ ಬರ್ಲೇಬೇಕಾಗಿದೆ..
ಹೌದು.. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ದರ್ಶನ್ ಗೆ ಕೊನೆಗೂ ಜಾಮೀನನ ಮೇಲೆ ಬಿಡುಗಡೆ ಭಾಗ್ಯ ಸಿಕ್ಕಿತ್ತು.. ಆದರೇ ದರ್ಶನ್ ಗಿದ್ದ ಬೆನ್ನುನೊವು ಮಾತ್ರ ಆಸ್ಪತ್ರೆಯಲ್ಲೇ ಉಳಿಯುವಂತೆ ಮಾಡಿತ್ತು.. ಈ ನಡುವೆ ಮೈಸೂರಿನ ಫಾರ್ಮ್ ಹೌಸ್ ಗೆ ತೆರಳಲು ನಿರ್ಧರಿಸಿದ್ದ ದರ್ಶನ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.. ಅದರಂತೆ ಕೊರ್ಟ್ ಎರಡು ವಾರಗಳ ಕಾಲ ಮೈಸೂರಿಗೆ ತೆರಳಲು ಅವಕಾಶ ನೀಡಿತ್ತು.. ಆ ಕಾಲವಕಾಶ ಇವತ್ತು ಮುಗ್ದಿದ್ದು ದರ್ಶನ್ ಬೆಂಗಳೂರಿನತ್ತ ಮುಖ ಮಾಡಲಿದ್ದಾರೆ..
ಅಂದ್ಹಾಗೆ ದರ್ಶನ್ ಬಿಡುಗಡೆಯಾದ ಬೆನ್ನಲ್ಲೇ ಮೂರು ಕಾರಣಗಳ ಉಲ್ಲೇಖಿಸಿ ಮೈಸೂರಿಗೆ ತೆರಳಲು ಅನುಮತಿ ಕೋರಿದ್ದರು.. ತನ್ನ 76 ವರ್ಷದ ತಾಯಿಯ ಭೇಟಿ ಮಾಡಲು, ಟಿ. ನರಸೀಪುರ ರಸ್ತೆಯ ಫಾರ್ಮ್ ಹೌಸ್ ನಲ್ಲಿರೋ ಪ್ರಾಣಿಗಳನ್ನ ನೋಡ್ಬೇಕು.. ಹಾಗೂ ಸರ್ಜರಿ ಬಗ್ಗೆ ವೈದ್ಯರ ಎರಡನೇ ಅಭಿಪ್ರಾಯ ಪಡೀಬೇಕು ಅಂತಾ.. ಈ ಮೂರು ಕಾರಣಗಳನ್ನು ಉಲ್ಲೇಖಿಸಿ ಮೈಸೂರಿಗೆ ಹೋಗೋಕೆ ಪರ್ಮಿಷನ್ ಕೊಡಿ ಅಂತಾ ರಿಕ್ವೆಸ್ಟ್ ಮಾಡಿದ್ರು.. ಅದರಂತೆ ಸಿಸಿಎಚ್ ಕೋರ್ಟ್ ನಟ ದರ್ಶನ್ ಮನವಿ ಹಿನ್ನಲೆ ಜನವರಿ ೫ರವರೆಗೂ ಅಂದ್ರೆ ಇವತ್ತಿನ ವರೆಗೂ ಮೈಸೂರಿನಲ್ಲಿರೋಕೆ ಅವಕಾಶ ಕೊಟ್ಟಿತ್ತು.. ಆದರೇ ಈ ಸಮಯ ಇಂದು ಮುಕ್ತಾಯಗೊಂಡಿದೆ.. ಹೀಗಾಗಿ ನಟ ದರ್ಶನ್ ಇಂದು ಅಥವ ನಾಳೆ ಮತ್ತೆ ವಾಪಾಸ್ ಬೆಂಗಳೂರಿಗೆ ಬಂದುಳಿಯಬೇಕಾಗಿದೆ..
ಇನ್ನು ಅವಧಿ ಮುಕ್ತಾಯ ಹಿನ್ನಲೆ ಬೆಂಗಳೂರಿಗೆ ನಟ ದರ್ಶನ್ ವಾಪಾಸ್ ಆಗುವುದರ ಬದಲಿಗೆ ಮೈಸೂರು ಭೇಟಿಯ ಅವಧಿ ವಿಸ್ತರಿಸುವಂತೆ ಕೋರ್ಟ್ ನಲ್ಲಿ ಮನವಿ ಮಾಡಲು ನಿರ್ಧರಿಸಿದ್ದಾರೆ.. ಅದರಂತೆ ವಕೀಲರೊಂದಿಗೆ ಸಹ ಈ ಸಂಬಂಧ ಚರ್ಚೆ ನಡೆಯುತ್ತಿದೆ.. ಫಿಸಿಯೋಥೆರೆಪಿ ಮಾಡಿಸಿಕೊಳ್ಳುವ ಮೂಲಕ ಬೆನ್ನು ಉರಿ ಸಮಸ್ಯೆ ವಾಸಿ ಮಾಡಿಸಿಕೊಳ್ಳುತಿದ್ದು, ಮೈಸೂರಿನಲ್ಲಿರುವ ತಾಯಿಯ ಜೊತೆಗಿರಲು.. ಸಾಕು ಪ್ರಾಣಿಗಳ ನೋಡಿಕೊಳ್ಳುವ ಕಾರಣಗಳ ನೀಡಿ ಉಳಿದುಕೊಳ್ಳಲು ಅವಕಾಶ ನೀಡುವಂತೆ ನಾಳೆ ಕೋರ್ಟ್ ನಲ್ಲಿ ಮನವಿ ಮಾಡಲು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ..
ಒಟ್ಟಾರೆ ಜೈಲಿನಿಂದ ಬಿಡುಗಡೆ ಬಳಿಕ ಆಸ್ಪತ್ರೆಯಿಂದ ಮೈಸೂರಿಗೆ ಶಿಫ್ಟ್ ಆದ ನಟ ದರ್ಶನ್ ಫಾರ್ಮ್ ಹೌಸ್ ನಲ್ಲಿ ವಾಸ್ತವ್ತ ಇಂದಿಗೆ ಅಂತ್ಯವಾಗಲಿದೆ.. ಆದರೇ ನಟ ದರ್ಶನ್ ಮತ್ತೆ ವಾಪಾಸ್ ಬೆಂಗಳೂರಿಗೆ ಬರ್ತಾರಾ ಅನ್ನೊ ಪ್ರಶ್ನೆಗೆ ನಾಳೆ ಕೋರ್ಟ್ ನ ಆಗೊ ಬೆಳವಣಿಗೆ ಉತ್ತರ ನೀಡಲಿದೆ..