ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ಇನ್ನೂ ನಟ ದರ್ಶನ್ ಚಿಕಿತ್ಸೆ ಬೇಡ, ಸ್ಕ್ಯಾನಿಂಗ್ ಬೇಡ ಎನ್ನುತ್ತಿದ್ದರು. ಆದರೆ ಕಳೆದೆರಡು ವಾರಗಳಿಂದ ದರ್ಶನ್ಗೆ ಆ ಬೆನ್ನು ನೋವನ್ನ ತಡೆಯುವುದಕ್ಕೆ ಆಗದೇ, ಹೈ ಸೆಕ್ಯುರಿಟಿ ಸೆಲ್ನಲ್ಲೇ ಒಬ್ಬರೇ ಒದ್ದಾಡುತ್ತಿದ್ದರು. ಇದನ್ನ ನೋಡಿದ ಜೈಲಾಧಿಕಾರಿಗಳು ನೀವು ಚಿಕಿತ್ಸೆಪಡಿಯಲೇ ಬೇಕು ಅಂತ ನಟಿನಿಗೆ ಸೂಚನೆ ನೀಡಿದ್ದರು.
ಬಳಿಕ ಜೈಲಿಗೆ ವಿಮ್ಸ್ ನ ಅರ್ಥೊಪೆಡಿಕ್ ಹಾಗೂ ನ್ಯೂರೋ ಸರ್ಜನ್ ಡಾ. ವಿಶ್ವನಾಥ ಭೇಟಿ ನೀಡಿ, ದರ್ಶನ್ ಆರೋಗ್ಯ ಪರಿಶೀಲನೆ ಮಾಡಿದ್ದರು. ಪರಿಶೀಲನೆ ಬಳಿಕ ಇದು ಬಹಳ ತೊಂದರೆ ಉಂಟು ಮಾಡಿದೆ, ಹೀಗಾಗಿ ತಕ್ಷಣ ಸ್ಕ್ಯಾನಿಂಗ್ ಮಾಡಿಸಬೇಕು ಅಂತ ಸೂಚನೆ ನೀಡಿದ್ದರು. ಜೊತೆಗೆ ಪೇನ್ ಕಿಲ್ಲರ್ ಮಾತ್ರಗಳನ್ನ ನೀಡಿ ಸ್ವಲ್ಪ ಸುಧಾರಿಸಿಕೊಳ್ಳಲು ದರ್ಶನ್ಗೆ ತಿಳಿಸಿದ್ದರು.
ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಕಾರಿ ಗೊತ್ತಾ..?
ಇನ್ನು ದರ್ಶನ್ಗೆ ಮೆಡಿಕಲ್ ಬೆಡ್, ದಿಂಬು ಹಾಗೂ ಚೇರ್ ನೀಡುವಂತೆ ಜೈಲಾಧಿಕಾರಿಗಳಿಗೆ ಡಾಕ್ಟರ್ ತಿಳಿಸಿದ್ದರು. ನಂತರ ದರ್ಶನ್ಗೆ ಬೆಡ್, ಬಿಂಬು, ಚೇರ್ ಸಿಕ್ಕಿತು. ಇನ್ನು ಪ್ರತಿದಿನ ಡಾ. ವೆಂಕಟ ಸುಬ್ಬಾರೆಡ್ಡಿಯಿಂದ ಫಿಸಿಯೋಥರಪಿ ಕೂಡ ದರ್ಶನಗೆ ನಡೆಯುತ್ತಿದೆ. ಆದರೂ ಬೆನ್ನು ನೋವು ಮಾತ್ರ ಕಡಿಮೆ ಆಗಿರಲಿಲ್ಲ. ಹೀಗಾಗಿ ಅ.22ರ ರಾತ್ರಿ 9.10 ಕ್ಕೆ ದರ್ಶರನ್ನ ಬಳ್ಳಾರಿ ವಿಮ್ಸ್ಗೆ ಶಿಪ್ಟ್ ಮಾಡಿ ಸ್ಕ್ಯಾನಿಂಗ್ ಮಾಡಿಸಲಾಗಿದೆ.
ವಿಮ್ಸ್ ನಲ್ಲಿ ನಡೆಸಿದ್ದ ಸ್ಕ್ಯಾನಿಂಗ್ ರಿಪೋರ್ಟ್ ಇಂದು ಜೈಲಾಧಿಕಾರಿಗಳ ಕೈ ಸೇರಿದೆ. MRI ಸ್ಕ್ಯಾನ್ ಸಂದರ್ಭದಲ್ಲಿ L 5 S1ನಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ನಿನ್ನೆ ರಾತ್ರಿಯೇ ಜೈಲಿಗೆ ಬಂದು L 5 S1 ಸಮಸ್ಯೆ ಬಗ್ಗೆ ವೈದ್ಯರು ಮನವರಿಕೆ ಮಾಡಿಕೊಟ್ಟಿದ್ದಾರೆ. ನಿರ್ಲಕ್ಷ್ಯ ಮಾಡದೇ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸುವ ಬಗ್ಗೆ ವರದಿ ನೀಡಿದ್ದಾರೆ. ವೈದ್ಯರ ವರದಿಯನ್ನು ಆಧರಿಸಿ ಜೈಲು ಅಧಿಕಾರಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆ ಮಾಡಿಸುವ ಕುರಿತು ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಬರುವ ಸಾಧ್ಯತೆ ಇದೆ.