ಮೈಸೂರು: ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಬೇಲ್ ಪಡೆದು ಹೊರಗೆ ಬಂದಿದ್ದಾರೆ. 2024, ದರ್ಶನ್ ಜೀವನದಲ್ಲಿ ಕಷ್ಟದ ದಿನಗಳೇ ಆಗಿತ್ತು. ಜೈಲಿಂದ ಹೊರ ಬಂದ ದರ್ಶನ್ ಹೊಸ ವರ್ಷವನ್ನುಹೊಸ ಹುರುಪಿನಿಂದಲೇ ಶುರು ಮಾಡಿದ್ರು. ಸಂಕ್ರಾಂತಿ ಹಬ್ಬವನ್ನು ಕೂಡ ಸಂಭ್ರಮದಿಂದ ಆಚರಿಸಿದ್ದಾರೆ.
ಇದೀಗ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದಾರೆ.ಇಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಡಾ.ಅಜಯ್ ಹೆಗಡೆ ಬಳಿ ಚಿಕಿತ್ಸೆಗೆ ನಟ ಆಗಮಿಸಿದ್ದಾರೆ. L5, S1 ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್ಗೆ ಬೆನ್ನಿಗೆ ಇಂಜೆಕ್ಷನ್ ನೀಡಲಾಗಿದೆ. ಇಂಜೆಕ್ಷನ್ ಫಲಿಸದಿದ್ದಲ್ಲಿ 3 ದಿನಗಳ ಬಳಿಕ ಆಪರೇಷನ್ ಮಾಡಲು ನಿರ್ಧರಿಸಲಾಗಿದೆ.
Mouth Wash Effects: ಬ್ರಷ್ ಮಾಡಿದ ನಂತರ ಮೌತ್ ವಾಶ್ ಬಳಸುತ್ತೀರಾ..? ಹಾಗಾದ್ರೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು!
ಇನ್ನೂ ಈ ವೇಳೆ, ಆಪ್ತ ಧನ್ವೀರ್ ಕೂಡ ದರ್ಶನ್ ಜೊತೆ ಆಸ್ಪತ್ರೆಗೆ ಆಗಮಿಸಿದ್ದಾರೆ. ಇನ್ನೂ ರೇಣುಕಾಸ್ವಾಮಿ ಪ್ರಕರಣ ಸಂಬಂಧ ದರ್ಶನ್ಗೆ ಮೈಸೂರಿನಲ್ಲಿ ಇರಲು ಜ.12ರಿಂದ ಜ.17ರವರೆಗೆ ಕೋರ್ಟ್ ಅನುಮತಿ ನೀಡಿತ್ತು.