ಬಳ್ಳಾರಿ: ಬೆನ್ನುನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ನಟ ದರ್ಶನ್ (Darshan) ಅವರಿಗೆ ಫಿಸಿಯೋಥೆರಪಿ (Physiotherapy) ಚಿಕಿತ್ಸೆ ನೀಡಲಾಗಿದೆ.
ಶುಕ್ರವಾರ ಸಂಜೆ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಜೈಲಿನ ಹೈ ಸೆಕ್ಯೂರಿಟಿ ಸೆಲ್ನಲ್ಲೇ ದರ್ಶನ್ ಗೆ ಒಂದು ಗಂಟೆ ಫಿಸಿಯೋಥೆರಪಿ ಮಾಡಲಾಗಿದೆ.
ನಿಮ್ಮ ಬೆಲೆಗೆ ತಕ್ಕಂತೆ ಹೊಸ ಟೊಯೋಟಾ ಕಾರು ಬಿಡುಗಡೆ: ಈ ಆಫರ್ ಅ. 31ರವರೆಗೆ ಮಾತ್ರ!
ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ L1, L5 ನಲ್ಲಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ವಿಮ್ಸ್ ಆಸ್ಪತ್ರೆಯ ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ಸ್ಕ್ಯಾನಿಂಗ್, ಸರ್ಜರಿ ಹಾಗೂ ಫಿಸಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ದರು.
ವೈದ್ಯರ ಸಲಹೆಯಂತೆ ಬುಧವಾರವೇ ಆರೋಪಿ ದರ್ಶನ್ಗೆ ಫಿಸಿಯೋಥೆರಪಿ ಆರಂಭಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಫಿಸಿಯೋಥೆರಪಿ ಮಾಡಿಸಲು ಸಾಧ್ಯವಾಗಿರಲಿಲ್ಲ.
ಶುಕ್ರವಾರ ಸಂಜೆ ಆರೋಪಿ ದರ್ಶನ್ ಗೆ ಫಿಸಿಯೋಥೆರಪಿ ಮಾಡಲಾಗಿದೆ. ಈಗಾಗಲೇ ವೈದ್ಯರ ಸೂಚನೆ ಮೇರೆಗೆ ಮೆಡಿಕಲ್ ಬೆಡ್, ದಿಂಬು, ಚೇರ್ ಕೊಡಲಾಗಿದ್ದು, ಕೊಂಚ ಮಟ್ಟಿಗೆ ದರ್ಶನ್ ಬೆನ್ನು ನೋವು ಕಡಿಮೆ ಆಗಿದೆ ಎನ್ನಲಾಗಿದೆ.