ಬೆಂಗಳೂರು: ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಅವರು ಈಗಾಗಲೇ ಮಧ್ಯಂತರ ಜಾಮೀನು ಪಡೆದು ಹೊರಗೆ ಇರುವುದರಿಂದ ಅವರಿಗೆ ಯಾವುದೇ ಹೆಚ್ಚಿನ ಚಿಂತೆ ಇಲ್ಲ. ತುರ್ತು ಆಪರೇಷನ್ ಅಗತ್ಯ ಎಂದು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ವೈದ್ಯರು ಡಿಸೆಂಬರ್ 11ಕ್ಕೆ ಆಪರೇಷನ್ ನಿಗದಿ ಮಾಡಿದ್ದರು. ಆದರೆ, ಈಗ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿದೆ.
Monday Tips: ಸೋಮವಾರ ಈ ಕೆಲಸ ಮಾಡಿದರೆ ಸಾಕು ಲಕ್ಷ್ಮೀ ಭಾಗ್ಯ ನಿಮ್ಮ ಮನೆಯಲ್ಲಿರುತ್ತೆ..!
ಇದೀಗ ರೆಗ್ಯುಲರ್ ಬೇಲ್ ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್ ದರ್ಶನ್ಗೆ ಕೆಲವು ಎಚ್ಚರಿಕೆಯನ್ನೂ ನೀಡಿದೆ.. ಜಾಮೀನು ಆದೇಶದಲ್ಲಿ ಸರ್ಜರಿ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ಬಗ್ಗೆಯೂ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.
ದರ್ಶನ್ ಗೆ ಹೈಕೋರ್ಟ್ ವಾರ್ನಿಂಗ್
ದರ್ಶನ್ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆಂದು ವೈದ್ಯರ ವರದಿ ಇದೆ. ಸರ್ಜರಿ ಅಗತ್ಯವೆಂಬ ಬಳ್ಳಾರಿ ವೈದ್ಯರ ವರದಿಯನ್ನ ಬಿಜಿಎಸ್ ವೈದ್ಯರು ದೃಢಪಡಿಸಿದ್ದಾರೆ. ಸರ್ಜರಿಗಾಗಿ ದರ್ಶನ್ರನ್ನ ಸಿದ್ಧಪಡಿಸಲಾಗುತ್ತಿದೆ ಎಂದು ವರದಿ ನೀಡಿದ್ದಾರೆ. ದರ್ಶನ್ ವೈದ್ಯಕೀಯ ಪರಿಸ್ಥಿತಿಯನ್ನ ಈ ಹಂತದಲ್ಲಿ ಸಂದೇಹಿಸಲು ಕಾರಣಗಳಿಲ್ಲ. ರೆಗ್ಯುಲರ್ ಜಾಮೀನಿಗೂ, ವೈದ್ಯಕೀಯ ಕಾರಣದ ಜಾಮೀನಿಗೂ ವ್ಯತ್ಯಾಸವಿದೆ. ಒಂದು ವೇಳೆ ಕೋರ್ಟ್ಗೆ ತಪ್ಪು ಮಾಹಿತಿ ನೀಡಿದ್ದರೆ ಪರಿಣಾಮ ಎದುರಿಸಬೇಕು. ಕಾನೂನಿನ ಹಾದಿಯಲ್ಲೇ ಪರಿಣಾಮ ಎದುರಿಸಬೇಕು.
ನಟ ದರ್ಶನ್ಗೆ ಹಾಕಿರುವ 6 ಷರತ್ತುಗಳೇನು?
- ತಲಾ 1 ಲಕ್ಷ ರೂ. ಬಾಂಡ್ ನೀಡಬೇಕು.
- ಇಬ್ಬರು ಶ್ಯೂರಿಟಿ ನೀಡಬೇಕು.
- ಕೋರ್ಟ್ ವಿಚಾರಣೆಗೆ ತಪ್ಪದೇ ಹಾಜರಾಗಬೇಕು.
- ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು.
- ಇಂಥದ್ದೇ ಬೇರೆ ಕೃತ್ಯಗಳಲ್ಲಿ ಭಾಗಿಯಾಗಬಾರದು.
- ಕೋರ್ಟ್ ಅನುಮತಿಯಿಲ್ಲದೆ ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳಬಾರದು.
ಜಾಮೀನು ಆದೇಶದಲ್ಲಿ ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳು, ಅಂತಿಮವಾಗಿ ಅರ್ಹತೆ ಆಧರಿಸಿ ಜಾಮೀನು ಮಂಜೂರು ಮಾಡಿದ್ದಾರೆ. ಇದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಕನ್ಸರ್ವೇಟಿವ್ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ಗೆ ಹೊಸ ಟೆನ್ಷನ್ ಶುರುವಾಗಿದೆ.. ಫಿಸಿಯೋಥೆರಪಿ ಸಾಕಾ? ಸರ್ಜರಿ ಮಾಡಿಸಿಕೊಳ್ಳಲೇಬೇಕಾ? ಅನ್ನೋ ಚಿಂತೆಗೆ ಬಿದ್ದಿದ್ದಾರೆ. ಒಂದು ವೇಳೆ ಸರ್ಜರಿ ಮಾಡಿಸಿಕೊಳ್ಳದಿದ್ರೆ ಕೋರ್ಟ್ ಎಚ್ಚರಿಸಿದಂತೆ ಕಾನೂನು ಪರಿಣಾಮ ಎದುರಾಗುತ್ತಾ ಎನ್ನುವ ಆತಂಕ ದರ್ಶನ್ಗೆ ಕಾಡತೊಡಗಿದೆ.. ಹೈಕೋರ್ಟ್ ಆದೇಶ ಪ್ರಶ್ನಿಸುವ ಬಗ್ಗೆ ತನಿಖಾಧಿಕಾರಿಗಳ ಚರ್ಚೆ
ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಸಿಕ್ಕಿರೋದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಮತ್ತು ಕಾನೂನು ತಜ್ಞರ ಜೊತೆಗೆ ಚರ್ಚೆಗೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚಿಸುತ್ತಿದ್ದಾರೆ..