ಬೆಂಗಳೂರು: ದರ್ಶನ್ ಗೆ ಬೆನ್ನುನೋವು ಚಿಕಿತ್ಸೆಗೆ ಅಂತ ಮಧ್ಯಂತರ ಜಾಮೀನು ಸಿಕ್ಕಿದೆ. ಆದ್ರೂ ದರ್ಶನ್ ಗೆ ಸಂಕಷ್ಟ ತಪ್ಪಿದ್ದಲ್ಲ. ಸ್ವಲ್ಪ ಯಾಮಾರಿದ್ರೂ ಜಾಮೀನು ರದ್ದಾಗೋ ಚಾನ್ಸ್ ಇದೆ. ಯಾಕಂದ್ರೆ ಪೊಲೀಸರು ದರ್ಶನ್ ನ ಅಷ್ಟೊಂದು ಅಬ್ಸರ್ವ್ ಮಾಡ್ತಾ ಇದ್ದಾರೆ. ಇದ್ರ ಮಧ್ಯೆ ಹೈಕೋರ್ಟ್ ಮಧ್ಯಂತರ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಕದತಟ್ಟಲೂ ಪೊಲೀಸರು ಚರ್ಚೆ ನಡೆಸ್ತಾ ಇದ್ದಾರೆ.
ನಟ ದರ್ಶನ್ ಗೆ ಬೆನ್ನುನೋವು ಚಿಕಿತ್ಸೆಗೆ ಅಂತ ಹೈಕೋರ್ಟ್ 45 ದಿನಗಳ ಕಾಲ ಮಧ್ಯಂತರ ಜಾಮೀನು ಕೊಟ್ಟಿದೆ. ಜಾಮೀನು ಕೊಡೋದ್ರ ಜೊತೆಗೆ 8 ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಅದ್ರಲ್ಲಿ ಯಾವುದೇ ಒಂದು ಷರತ್ತುಉಲ್ಲಂಘನೆ ಆದ್ರೂ ನಟ ದರ್ಶನ್ ಗೆ ಸಂಕಷ್ಟ ತಪ್ಪಿದ್ದಲ್ಲ. ಬದಲಾಗಿ ಜಾಮೀನು ರದ್ದಾಗೋ ಸಾಧ್ಯತೆಯೂ ಇರುತ್ತೆ.
ಸರ್ವರಿಗೂ “ಕನ್ನಡ ರಾಜ್ಯೋತ್ಸವ”ದ ಶುಭಾಶಯಗಳು: ನಾಡ ಹಬ್ಬದ ಮಹತ್ವ, ಇತಿಹಾಸದ ಬಗ್ಗೆ ಗೊತ್ತೆ? ಇಲ್ಲಿದೆ ಮಾಹಿತಿ
ಯಾಕಂದ್ರೆ ದರ್ಶನ್ ಹೊರಗಡೆ ಇರೋ ವೇಳೆಯಲ್ಲಿ ಪೊಲೀಸರು ನಟ ದರ್ಶನ್ ಪ್ರತಿ ಹೆಜ್ಜೆಯನ್ನು ಅಬ್ಸರ್ವ್ ಮಾಡ್ತಾನೆ ಇರುತ್ತೆ. ಹೀಗಾಗಿ ನಟ ದರ್ಶನ್ ಇಡೋ ಪ್ರತಿ ಹೆಜ್ಜೆಯೂ ಸೂಕ್ಷ್ಮವಾಗಿ ಇರಬೇಕಾಗುತ್ತೆ. ಒಂದು ವೇಳೆ ಯಾವುದೇ ಒಂದು ಷರತ್ತು ಉಲ್ಲಂಘನೆ ಆದ್ರೂ ಇದಕ್ಕೆ ಪ್ರಮುಖ ಅಸ್ತ್ರವಾಗಿ ಇಟ್ಟುಕೊಂಡು ಹೈಕೋರ್ಟ್ ಮೋರೆ ಹೋಗಿ ಜಾಮೀನು ರದ್ದು ಮಾಡಿರೋ ಸಾಧ್ಯತೆಯೂ ಇರುತ್ತೆ.
ಇನ್ನು ದರ್ಶನ್ ಜಾಮೀನು ಪಡೆದು ಮನೆಗೆ ಬಂದ್ರೂ ಇನ್ನು ಚಿಕಿತ್ಸೆ ಪಡೆಯೋಕೆ ಮುಂದಾಗಿಲ್ಲ. ಇತ್ತ ನಗರ ಪೊಲೀಸ್ ಆಯುಕ್ತರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೋರೆ ಹೋಗಲು ಮುಂದಾಗಿದ್ದಾರೆ. ಹೀಗಾಗಿಯೇ ಕಮೀಷನರ್ ದಯಾನಂದ್ ತನಿಖಾಧಿಕಾರಿಗಳು, ವಕೀಲರು ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದಾರೆ. ಈ ವೇಳೆ ಹೈಕೋರ್ಟ್ ಆದೇಶ ಪ್ರತಿ ಸಿಕ್ಕ ಬಳಿಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಲು ಚರ್ಚೆ ನಡೆದಿದೆ.