ಬೆಂಗಳೂರು:- ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಹಾಗೂ ರೌಡಿಗಳ ಜೊತೆ ಫೋಟೊ ವೈರಲ್ ಹಿನ್ನೆಲೆ ಆಂತರಿಕ ತನಿಖೆಗೆ ಜೈಲಿನ ಡಿಜಿ ಮಾಲಿನಿ ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ.
ನಟ ದರ್ಶನ್ ಗೆ ಜೈಲಲ್ಲಿ ರಾಜಾತಿಥ್ಯ: ಕುಖ್ಯಾತ ರೌಡಿ ಶೀಟರ್ ಜೊತೆಗೆ ಹೈಫೈ ಲೈಪ್!
ರಾಜಾತಿಥ್ಯ ನೀಡಿದ ವಿಚಾರ ಹಾಗೂ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು ಅನ್ನೋ ತನಿಖೆ ನಡೆಸಲು ಸೂಚನೆ ಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಆನಂದ್ ರೆಡ್ಡಿ ಹಾಗೂ ಸೋಮಶೇಖರ್ ಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.
ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ಕೊಡಲಾಗಿದೆ. ಬಹುತೇಕ ನಾಳೆ ಅಥವಾ ಇವತ್ತು ರಾತ್ರಿಯೇ ಜೈಲಿಗೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಜೈಲಿಗೆ ಭೇಟಿ ನೀಡಿ ಅಧಿಕಾರಿಗಳ ವಿಚಾರಣೆ ಮಾಡಲಿದ್ದು, ಅಧಿಕಾರಿಗಳ ವಿಚಾರಣೆ ಜೊತೆಗೆ ಸಿಸಿ ಕ್ಯಾಮರಾ ಗಳ ಪರಿಶೀಲನೆ ಮಾಡಲಿದ್ದಾರೆ. ಏನೆಲ್ಲಾ ರಾಜಾತಿಥ್ಯ ನೀಡಲಾಗಿತ್ತು ಅನ್ನೋ ಕುರಿತಾಗಿ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ.