ಬೆಂಗಳೂರು: ನಟ ದರ್ಶನ್ ಇಂದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮನೆಯಲ್ಲಿ ನಟ ದರ್ಶನ್ ಅವರಿಗೆ ಯಾವ ರೀತಿ ಟ್ರೀಟ್ಮೆಂಟ್ ನೀಡುವುದು ಎನ್ನುವ ವಿಧಾನದ ಬಗ್ಗೆ ಕುಟುಂಬಸ್ಥರು ಮಾಹಿತಿ ಪಡೆದಿದ್ದಾರಂತೆ. ಆದ್ದರಿಂದ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಪಡೆಯದೇ 49 ದಿನಗಳ ನಂತರ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದರ್ಶನ್ ಕುಟುಂಬ ಫಿಸಿಯೋಥೆರಪಿ ಮೂಲಕವೇ ಬೆನ್ನುನೋವು ಗುಣಪಡಿಸಿಕೊಳ್ಳುವ ಪ್ಲ್ಯಾನ್ ಮಾಡಿದೆ, ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದ್ದಾರೆ. ಆಸ್ಪತ್ರೆಯ ಬಿಲ್ ಸೇರಿದಂತೆ, ಎಲ್ಲಾ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ದರ್ಶನ್ ತಮ್ಮ ಕಾರಿನಲ್ಲಿ ತೆರಳಿದ್ದಾರೆ.
ನಿಮಗೆ ಅರಿವಿಲ್ಲದೆ PAN Card ದುರ್ಬಳಕೆ ಆಗಿರಬಹುದು ಎಂಬ ಅನುಮಾನವಿದ್ದರೆ ಹೀಗೆ ಮಾಡಿ ಸಾಕು..! ನಿಮ್ಮ ಕಾರ್ಡ್ ಸೇಫ್
ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ಗೆ ಕಳೆದ ಅಕ್ಟೋಬರ್ 31ರಂದು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆದ 2-3 ದಿನಗಳ ಬಳಿಕ ದರ್ಶನ್ ಆಸ್ಪತ್ರೆಗೆ ದಾಖಲಾದರೂ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಫೋಟೋ ಸಹ ವೈರಲ್ ಆಗಿತ್ತು. ಇದೀಗ ಚಿಕಿತ್ಸೆ ಪಡೆಯದೇ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ.
ದರ್ಶನ್ ಅವರಿಗೆ ಮನೆಯಲ್ಲಿಯೇ ಫಿಸಿಯೋಥೆರಪಿ ಮೂಲಕ ಚಿಕಿತ್ಸೆ ನೀಡಲು ವಿಜಯಲಕ್ಷ್ಮಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರಂತೆ. ಅವರು ಪತಿಯನ್ನು ತಮ್ಮ ಕತ್ರಿಗುಪ್ಪೆ ಫ್ಲಾಟ್ಗೆ ಕರೆದುಕೊಂಡು ಹೋಗಬಹುದು ಎಂದು ಹೇಳಲಾಗುತ್ತಿದೆ.