ರೇಣುಕಾ ಸ್ವಾಮಿ ಕೊಲೆ ಕೇಸ್ ನ A2 ಆರೋಪಿ ನಟ ದರ್ಶನ್ BGS ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗಾದ್ರೆ ಅವರಿಗೆ ಸರ್ಜರಿ ಅವಶ್ಯಕತೆ ಇರಲಿಲ್ವ. ಜೈಲಿಂದ ಹೊರಬರಲು ನಾಟಕಾವಾಡಿದ್ರ ಎಂಬ ಅನಮಾನ ಮಾಡಿಸಿದೆ. ಹಾಗಾದ್ರೆ ದರ್ಶನ್ ವಿಷಯದಲ್ಲಿ ಇವತ್ತಾಗಿರುವ ಡೆವಲಪ್ಮೆಂಟ್ ಏನೂ ಅಂತಾ ತೋರಿಸ್ತಿವಿ ನೋಡಿ.
ಯೆಸ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ A2 ಆರೋಪಿಯಾಗಿರುವ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಬೆಳಗ್ಗೆ 9 ಗಂಟೆ ಸುಮಾರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ , ಪುತ್ರ ವಿನೀಶ್, ಆಪ್ತ ಧನ್ವೀರ್ ಆಸ್ಪತ್ರೆಗೆ ಆಗಮಿಸಿದ್ರು. ಕೆಲ ಹೊತ್ತಿನಲ್ಲಿ ಡಿಸ್ಚಾರ್ಜ್ ಪ್ರೊಸಿಜರ್ ಮುಗಿಸಿ ಆಸ್ಪತ್ರೆಯಿಂದ 11.30 ರ ಸುಮಾರಿಗೆ ಹೊರಟರು.
ಬಳ್ಳಾರಿಯಿಂದ ಕಾರು ಓಡಿಸಿಕೊಂಡು ಬಂದಿದ್ದ ನಟ ಧನ್ವೀರ್ ಇಲ್ಲಿಯೂ ಕಾರು ಓಡಿಸಿಕೊಂಡು ಹೊಸಕೆರೆಹಳ್ಳಿಯ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ ಗೆ ನಟ ದರ್ಶನ್ ಕರೆತಂದರು. ಅಭಿಮಾನಿಗಳು ಆರ್ ಆರ್ ನಗರದ ಮನೆಗೆ ಹೆಚ್ಚಾಗಿ ಬರುವ ಸಾಧ್ಯತೆ ಹಿನ್ನೆಲೆ ದರ್ಶನ್ ಪತ್ನಿಯ ಮನೆಯಲ್ಲೇ ರೆಸ್ಟ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಬ್ಬಬ್ಬಾ.. ಹಸಿರು ಟೊಮೆಟೊ ಬೇಸಾಯ ಮಾಡಿ ಲಕ್ಷಗಟ್ಟಲೇ ಲಾಭ ಪಡೆಯಿರಿ..!
ಕೊಲೆ ಮಾಡಿದ ಆರೋಪದಲ್ಲಿ ಬಳ್ಳಾರಿ ಜೈಲಲ್ಲಿ ಕಂಬಿ ಎಣಿಸುತ್ತಿದ್ದ ಡೆವಿಲ್ ಗೆ ಮಧ್ಯಂತರ ಜಾಮೀನು ಸಿಗಲು ಪ್ರಮುಖ ಕಾರಣ ಬೆನ್ನು ನೋವು.ಈ ನೋವಿಗೆ ಸರ್ಜರಿ ಮಾಡಿಲ್ಲ ಅಂದ್ರೆ ದರ್ಶನ್ ಗೆ ಸ್ಟ್ರೋಕ್ ಆಗುತ್ತೆ ಅಂತಾ ಹಿರಿಯ ವಕೀಲ ಸಿವಿ ನಾಗೇಶ್ ಪ್ರಬಲ ವಾದ ಮಂಡಿಸಿದ್ರು. ಈ ಹಿನ್ನೆಲೆ ದರ್ಶನ್ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ಬೇಲ್ ನೀಡಿತ್ತು. ಆದರೆ ಬಿಜಿಎಸ್ ಆಸ್ಪತ್ರೆ ಸೇರಿ ಒಂದೂವರೆ ತಿಂಗಳು ಕಳೆದ್ರು ಸಹ ದರ್ಶನ್ ಗೆ ಸರ್ಜರಿ ಆಗ್ಲೇ ಇಲ್ಲಾ ಅನ್ನೋದು ಗಮನಾರ್ಹ.
ಬಿಪಿ ವೇರಿಶಿಯನ್ ಇದೆ ಅಂತಾ ಹೇಳಿ ಸರ್ಜರಿ ಮುಂದಕ್ಕೆ ಹಾಕಲಾಗಿತ್ತು. ಯಾವಾಗ ರೆಗ್ಯುಲರ್ ಬೇಲ್ ಸಿಕ್ತೋ ದರ್ಶನ್ ವರಸೆ ಬದಲಾಯಿಸಿದ್ರು ಎನ್ನಬಹುದು. ನನಗೆ ಸರ್ಜರಿ ಬೇಡ, ಫಿಜಿಯೋಥೆರಫಿ ಮೂಲಕ ನೋವು ವಾಸಿ ಮಾಡಿ ಅಂತಾ ವೈದ್ಯರನ್ನ ಕೇಳಿಕೊಂಡು
ಯಾವುದೇ ಸರ್ಜರಿ ಮಾಡಿಸಿಕೊಳ್ಳದೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದರ್ಶನ್ ಈ ನಡೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಜೈಲಿಂದ ಹೊರಬರಲು ಕರಿಯ ಈ ರೀತಿ ನಾಟಕಾವಾಡಿದ್ರ ಎಂಬ ಅನುಮಾನಗಳು ಹುಟ್ಟಿಕೊಳ್ಳುವಂತೆ ಮಾಡಿದೆ.
ಇನ್ನೂ ನಟ ದರ್ಶನ್ ಗೆ ಸದ್ಯ ರಿಲೀಫ್ ಸಿಕ್ಕಿರಬಹುದು. ಆದರೆ ಪೊಲೀಸರು ಕೊಲೆ ಆರೋಪಿ ದರ್ಶನ್ ಗೆ ಬೇಲ್ ಕೊಟ್ಟಿರುವುದನ್ನು ಪ್ರಶ್ನಿಸಿ ಸುಪ್ರೀಂಗೆ ಹೋಗಲು ನಿರ್ಧರಿಸಿ ಚರ್ಚೆ ನಡೆಸಿದ್ದಾರೆ. ಹೀಗಾಗಿ ದರ್ಶನ್ ಅಡಕತ್ತರಿಯಲ್ಲೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ. ಒಟ್ಟಾರೆಯಾಗಿ ಒಬ್ಬ ಸ್ಟಾರ್ ನಟನಾಗಿ ಕೋಪದ ಕೈಗೆ ಬುದ್ದಿಕೊಟ್ಟು ದರ್ಶನ್ ಜೈಲು ಸೇರಿ ಈಗ ಜಾಮೀನು ಪಡೆದು ಹೊರಗಡೆ ಇರುವುದು ಅವರ ಕುಟುಂಬ, ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿರುವಂತು ಸುಳ್ಳಲ್ಲ.