ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ್ ಟೀಂ ಶತ ಪ್ರಯತ್ನ ನಡೆಸುತ್ತಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿದ್ದು, ನಮ್ಮ ಪಕ್ಷದ ಕೆಲ ಲೀಡರ್ ಗಳು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಗೊಂದಲ ಹಠಾವೋ ಬಿಜೆಪಿ ಬಚಾವೋ ಆದೋಂಲನಾ ಪ್ರಾರಂಭಿಸಿದ್ದೇವೆ. ನಾಯಕರ ಹೇಳಿಕೆಯಿಂದ ಕಾರ್ಯಕರ್ತರಿಗೆ ನೋವಾಗಿದೆ ಕೆಲಸ ಮಾಡಲು ಆಗುತ್ತಿಲ್ಲ. ಯತ್ನಾಳ್ ಟೀಂ ಸುಮ್ನೆ ಪಕ್ಷದಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ. ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡಿದ್ದು ಹೈಕಮಾಂಡ್, ಈಗ ಹೈಕಮಾಂಡ್ ನಿರ್ಧಾರವನ್ನೇ ಯತ್ನಾಳ್ ಟೀಂ ಪ್ರಯತ್ನಿಸುತ್ತಿರೋದು ಸರಿಯಲ್ಲ
ವಿಜಯೇಂದ್ರ ರಾಜ್ಯಾಧ್ಯಕ್ಷರು ಆಗಿರೋದು ತಪ್ಪಿಲ್ಲ. ಯತ್ನಾಳ್ ಅವರೇ ಕಾರ್ಯಕರ್ತರ ಸಹನೆ ಪರೀಕ್ಷಿಸಬೇಡಿ. ಯಡಿಯೂರಪ್ಪನವರ ಬಗ್ಗೆ ಯತ್ನಾಳ್ ಬಾಯಿಗೆ ಬಂದಹಾಗೇ ಮಾತಾಡುತ್ತಾರೆ. ಯಡಿಯೂರಪ್ಪನವರ ನಾಯಕತ್ವದಿಂದ ಬಿಜೆಪಿ ಪಕ್ಷ ಉಳಿದುಕೊಂಡಿದ್ದೆ. ಅಪ್ಪ ಮಕ್ಕಳ ಪಕ್ಷ ಎಂದು ಯತ್ನಾಳ್ ಬಾಯಿಗೆ ಬಂದಹಾಗೇ ಮಾತನಾಡುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಸಹ ರಾಘವೇಂದ್ರ ಅಭಿವೃದ್ದಿಯ ಬಗ್ಗೆ ಮಾತನಾಡುತ್ತಾರೆ. ಅಂಥ ಕೆಲಸವನ್ನು ಶಿವಮೊಗ್ಗದಲ್ಲಿ ರಾಘವೇಂದ್ರ ಮಾಡಿದ್ದಾರೆ. ಈ ಬಾರಿಯೇ ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಸಿಗಲಿಲ್ಲ ಮುಂದೆ ಸಿಗಬಹುದು ಎಂಬ ಭರವಸೆ ಇದೆ
ಕಾಂಗ್ರೆಸ್ ವೈಫಲ್ಯದ ಬಗ್ಗೆ ಖಂಡಿಸೋದನ್ನಾ ಬಿಟ್ಟು ದೆಹಲಿ ಹೋಗಿ ಕೂತಿದ್ದಾರೆ. ಕಾರ್ಯಕರ್ತರು ದುಡಿದು ನಿಮಗೆ ಗೆಲ್ಲಿಸಿದ್ದಾರೆ ದೆಹಲಿಗೆ ಹೋಗಿ ಕೂರಲು ಅಲ್ಲ. ಯಡಿಯೂರಪ್ಪ ನವರ ಬಗ್ಗೆ ಏಕವಚನದಲ್ಲಿ ಮಾತನಾಡಿದರೇ ತಕ್ಕ ಪಾಠ ಕಳಿಸುತ್ತೇವೆ ಎಂದು ಕಿಡಿಕಾರಿದರು.