ಮಕ್ಕಳ ದೇಹವು ತುಂಬಾ ಸೂಕ್ಷ್ಮವಾಗಿರುತ್ತದೆ, ದೇಹದಲ್ಲಿ ಏನೇ ಸ್ವಲ್ಪ ಏರುಪೇರಾದರೂ ದೊಡ್ಡ ಅಪಾಯವನ್ನೇ ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಪೋಷಕರ ನಿದ್ದೆಗೆಡಿಸಿದೆ
ಮಕ್ಕಳಲ್ಲಿ ಕ್ಯಾನ್ಸರ್ ಬರುವುದಕ್ಕೂ ವಯಸ್ಕರಿಗೆ ಕ್ಯಾನ್ಸರ್ ಬರುವುದಕ್ಕೂ ವ್ಯತ್ಯಾಸಗಳಿವೆ. ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ಹಾಗೂ ಹಲವು ಪಟ್ಟುಗಳಷ್ಟು ಹೆಚ್ಚಾಗುವುದಕ್ಕೂ ಇಬ್ಬರಲ್ಲೂ ಹಲವು ವ್ಯತ್ಯಾಸಗಳಿವೆ. ಇನ್ನು, ಮಕ್ಕಳಿಗೆ ಕ್ಯಾನ್ಸರ್ ತಗುಲಿರುವುದನ್ನು ಬೇಗ ಕಂಡು ಹಿಡಿದರೆ ಹಾಗೂ ತಡೆಗಟ್ಟುವ ಕ್ರಮಗಳಿಂದ ಮಕ್ಕಳಿಗೆ ರೋಗದಿಂದ ದೂರವಿಡಬಹುದು.
Be Alert: ಪೋಷಕರೆ ಎಚ್ಚರ : ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಮಂಗನಬಾಹು ಕಾಯಿಲೆ! ಲಕ್ಷಣಗಳು ಯಾವುವು ?
ಆ ಹವ್ಯಾಸಗಳಿಂದ ವಯಸ್ಕರಲ್ಲಿ ಕ್ಯಾನ್ಸರ್ ಬರುವ ಅಪಾಯವನ್ನೂ ಹೆಚ್ಚು ಮಾಡುತ್ತದೆ. ಹೀಗಾಗಿ, ಕ್ಯಾನ್ಸರ್ ಬರದಂತೆ ತಡೆಯಲು ಇರುವ 5 ಹವ್ಯಾಸಗಳು ಯಾವುವು ಗೊತ್ತಾ?
ಬಾಲ್ಯದಲ್ಲಿ ಬೊಜ್ಜು ಬರದಂತೆ ತಡೆಯಿರಿ
ಜಂಕ್ ಫುಡ್ ಬದಲು ಮಕ್ಕಳಿಗೆ ಆರೋಗ್ಯಕರ ಹಾಗೂ ಅಧಿಕ ಪೌಷ್ಠಿಕಾಂಶಗಳುಳ್ಳ ಆಹಾರ ನೀಡಲು ಆದ್ಯತೆ ನೀಡಿ. ಈ ಮೂಲಕ ನಿಮ್ಮ ಮಕ್ಕಳ ತೂಕವನ್ನು ನಿಭಾಯಿಸಬಹುದು. ಬೊಜ್ಜು ಮೈ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ.
ದೈಹಿಕ ಚಟುವಟಿಕೆ
ಮೊಬೈಲ್ ಹಾಗೂ ವೀಡಿಯೋ ಗೇಮ್ಗಳ ಈ ಕಾಲಮಾನದಲ್ಲಿ ಮಕ್ಕಳು ದೈಹಿಕವಾಗಿ ಚಟುವಟಿಕೆಯಿಂದ ಇರಲು ನೋಡಿಕೊಳ್ಳಬೇಕಾದುದು ಅಗತ್ಯವಾಗಿದೆ. ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮದಿಂದ ದೇಹವನ್ನು ಸರಿಯಾಗಿ ನಿಯಂತ್ರಣದಲ್ಲಿಡಬಹುದು ಹಾಗೂ ಆರೋಗ್ಯಕರವಾಗಿರಬಹುದು. ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳು ದೈಹಿಕ ಚಟುವಟಿಕೆಯಿಂದ ಬರುವ ಅಪಾಯ ತಗ್ಗುತ್ತದೆ.
ಆರೋಗ್ಯಕರ ಜೀವನಶೈಲಿ
ನಿಮ್ಮನ್ನು ನೋಡಿ ಮಕ್ಕಳು ಬೆಳೆಯುತ್ತಾರೆ. ಹೀಗಾಗಿ, ನೀವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಸಹ ಪ್ರಮುಖವಾಗಿದೆ. ಇದರಿಂದ ತಮ್ಮ ಜೀವನದಲ್ಲಿ ತಮ್ಮ ಮಕ್ಕಳೂ ಸಹ ಅದನ್ನು ಅಳವಡಿಸಿಕೊಳ್ಳುತ್ತಾರೆ. ಬೇಗ ಏಳುವುದು, ಸಮಯಕ್ಕೆ ತಕ್ಕಂತೆ ನಿದ್ದೆ ಮಾಡುವುದು, ಧೂಮಪಾನ ಮಾಡದಿರುವುದು, ಹೆಚ್ಚು ಕುಡಿಯುವುದನ್ನು ತ್ಯಜಿಸುವುದು ಮುಂತಾದವುಗಳನ್ನು ನೀವು ಮಾಡಿ ನಿಮ್ಮ ಮಕ್ಕಳಿಗೂ ಅಭ್ಯಾಸ ಮಾಡಿಸಬೇಕಾಗಿದೆ. ಇದರಿಂದ ನಿಮ್ಮ ಮಕ್ಕಳು ಖುಷಿಯಾಗಿ ಹಾಗೂ ಆರೋಗ್ಯಕರವಾಗಿ ಜೀವನ ಮಾಡುತ್ತಾರೆ.
ನಿಯಮಿತ ಆರೋಗ್ಯ ತಪಾಸಣೆ
ರೇಡಿಯೇಷನ್ ಮುಂತಾದ ಪರಿಸರದ ಅಂಶಗಳಿಂದ ಬಾಲ್ಯದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಈ ರೀತಿಯ ಕ್ಯಾನ್ಸರ್ ತಡೆಯುವುದಕ್ಕೆ ಏನೂಮಾಡಲು ಸಾಧ್ಯವಿಲ್ಲ ಎಂದು ಅಮೆರಿಕದ ಕ್ಯಾನ್ಸರ್ ಸೊಸೈಟಿ ಹೇಳುತ್ತದೆ. ಆದರೆ, ನಿಮ್ಮ ಮಕ್ಕಳನ್ನು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಈ ರೀತಿಯ ಕ್ಯಾನ್ಸರ್ ಗುಣಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ.