ಕಲಬುರಗಿ: ರಾಜ್ಯದ ಒಟ್ಟು 1000 ಸ್ಮಾರಕಗಳ ದತ್ತು ಕೊಡುವ ಉದ್ದೇಶವಿದ್ದು ಇದು ಎರಡು ವರ್ಷದಲ್ಲಿ ಈಡೇರಿಸುವ ಆಸೆ ಇದೆ. ಈ ಎಲ್ಲ ಸ್ಮಾರಕಗಳ ರಕ್ಷಣೆ ಆ ಬಗ್ಗೆ ಪುಸ್ತಕಗಳ ಪ್ರಕಟಣೆ ಸೇರಿದಂತೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದ್ರು.
ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿರುವ ಪುರಾತನ ನಾಗಾವಿ ಕ್ಷೇತ್ರಕ್ಕೆ ಭೇಟಿ ನೀಡಿ ನಂತ್ರ ಮಾತನಾಡಿ ಈ ರೀತಿ ಹೇಳಿದ್ರು.. ಕನ್ನಡದ ಮೊಟ್ಟಮೊದಲ ವಿವಿ ಅಂದ್ರೆ ಅದು ನಾಗಾವಿ ವಿವಿ ಇಲ್ಲಿ ಕಾನೂನು, ಗಣಿತ, ವೇದ, ಮನು ಸಾಹಿತ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿತ್ತು.
ಸುಮಾರು 1800 ವರ್ಷಗಳ ಹಿಂದೆ ವಿವಿ ಕೆಲಸ ಮಾಡುತ್ತಿತ್ತು ಎನ್ನುವುದೇ ಹಿರಿಮೆ ಎಂದು ಹೊಗಳಿದರು.ಇಂತಹ ನಾಗಾವಿ ಪುನರುಜ್ಜೀವನ ಗೊಳ್ಳಬೇಕು ಇದಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ದ ಎಂದು ಸಚಿವ ಪ್ರಿಯಾಂಕ್ ಅವರಿಗೆ ಭರವಸೆ ನೀಡಿದ್ರು…