ತುಮಕೂರು:- ಟಾಯ್ಲೆಟ್ ಗೆ ಬಳಸುವ ಆ್ಯಸಿಡ್ ಬಾಟಲ್ ಸಿಡಿತಗೊಂಡು ಹಲವರಿಗೆ ಸಣ್ಣ ಪುಟ್ಟ ಗಾಯವಾಗಿರುವ ಘಟನೆ ತುಮಕೂರು ತಾಲೂಕಿನ ಗೂಳೂರು ಬಳಿ ಜರುಗಿದೆ.
ಖಾಸಗಿ ಬಸ್ ನಲ್ಲಿ ಆ್ಯಸಿಡ್ ಬಾಟಲ್ ಇಟ್ಟುಕೊಂಡು ತುಮಕೂರು ಕಡೆ ಮಹಿಳೆ ಬರುತ್ತಿದ್ದರು. ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿಂದ ಮಹಿಳೆ ಬರ್ತಿದ್ದರು. ಬಾಟಲ್ ಗೆ ಒತ್ತಡ ಹೆಚ್ಚಾಗಿ ಸಿಡಿದಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ.
ಸಣ್ಣ ಪುಟ್ಟ ಗಾಯವಾದವರಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.