ಬೆಳಗಾವಿ:- ಕಳ್ಳತನಕ್ಕೆ ನಾನಾ ಕಾರಣಗಳು ಇರತ್ತೆ ಮರ್ರೆ. ಅವರವರ ಕಷ್ಟಕ್ಕೆ ಈ ರೀತಿ ಕೆಟ್ಟ ಹಾದಿ ತಿಳಿಯಬಹುದು ಅಥವಾ ಸಹವಾಸ ದೋಷದಿಂದ ಈ ರೀತಿ ಮಾಡಬಹುದು.
Bagalakote: ಆಶಾಕಾರ್ಯಕರ್ತೆಯರಿಗೆ ಕನಿಷ್ಟ ವೇತನ ಜಾರಿಗೊಳಿಸಲು ಪ್ರತಿಭಟನೆ!
ಆದ್ರೆ ಈ ಭೂಪನೊಬ್ಬ ತನ್ನ ಹೆಂಡ್ತಿಗೆ ಮಂಗಳಸೂತ್ರ ಕೊಡಿಸಲು ಎಟಿಎಂಗೆ ಕನ್ನ ಹಾಕಿದ್ದ. ಪ್ರಕರಣ ಸಂಬಂಧ ದೂರು ದಾಖಲಿಸಿದ ಪೊಲೀಸರು, ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಕೃಷ್ಣಾ ಸುರೇಶ್ ದೇಸಾಯಿ ಬಂಧಿತ ಆರೋಪಿ. ಈತ ಹೆಚ್ಡಿಎಫ್ಸಿ ಬ್ಯಾಂಕ್ ಎಟಿಎಂನಲ್ಲಿ ಹಣ ಎಗರಿಸಿದ್ದ. ಎಂಟು ಲಕ್ಷ ಹಣ ಕಳ್ಳತನ ಮಾಡಿದ್ದ. ಕೃಷ್ಣಾ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ. ಎಟಿಎಂ ಮಷಿನ್ ಕೀ ತನ್ನ ಬಳಿಯೇ ಇರ್ತಿತ್ತು. ಟೀಂ ಜೊತೆಗೆ ಬಂದು ಹಣ ಹಾಕಿ ಬಳಿಕ ಸಂಜೆ ಒಬ್ಬನೇ ಬಂದು ಕಳ್ಳತನ ಮಾಡಿದ್ದಾನೆ.
ಹಣ ಹಾಕಲು ಇರುತ್ತಿದ್ದ ಎಟಿಎಂ ಮಷಿನ್ ಕೀ ಬಳಸಿಯೇ ಎಂಟು ಲಕ್ಷ ಹಣ ಕಳ್ಳತನ ಮಾಡಿದ್ದಾನೆ. ಎರಡು ದಿನದ ಬಳಿಕ ಈತನ ಕೃತ್ಯ ಬೆಳಕಿಗೆ ಬಂದಿತ್ತು. ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ಎಟಿಎಂನಿಂದ ತಮ್ಮ ಸಿಬ್ಬಂದಿ ಹಣ ಕದ್ದಿದ್ದು ಕಂಡು ಇತರರು ಶಾಕ್ ಆಗಿದ್ದರು.
ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ