ಬೆಂಗಳೂರು:- ಹೊಸ ತೊಡಕಿಗೆ ಮಟನ್ ಚೀಟಿ ಹೆಸರಲ್ಲಿ ಮೋಸ ಮಾಡಿದ ಆರೋಪಿಯ ಮನೆ ಜಪ್ತಿ ಮಾಡಲಾಗಿದೆ. ಪುಟ್ಟಸ್ವಾಮಿಗೌಡ ಬಂಧಿತ ಆರೋಪಿ.
ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ ಬಿ ಎಸ್ ಯಡಿಯೂರಪ್ಪ!
ಆರೋಪಿಯು ಯುಗಾದಿ ಹಬ್ಬದ ಹೊಸ ತೊಡಕಿಗೆ ಮಟನ್ ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದ.
ಈ ಸಂಬಂಧ ಈತನ ಮೇಲೆ ಹಲವು ಪ್ರಕರಣ ದಾಖಲಾಗಿದವು. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಪುಟ್ಟಸ್ವಾಮಿಗೌಡ ಮನೆಯನ್ನು ಸುಪರ್ದಿಗೆ ಪಡೆದಿದ್ದು, ಈತ ಸಂಗ್ರಹಿಸಿದ ಹಣದಲ್ಲಿ ತನ್ನ ಸಾಲ ತೀರಿಸಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಬ್ಯಾಟರಾಯನಪುರ ಠಾಣಾ ಪೊಲೀಸರ ತನಿಖೆ ವೇಳೆ ಪುಟ್ಟಸ್ವಾಮಿಗೌಡನ ಖಾತೆಯಲ್ಲಿ ಸಾವಿರಕ್ಕಿಂತಲೂ ಕಡಿಮೆ ಹಣವಷ್ಟೇ ಇರುವುದು ತಿಳಿದುಬಂದಿದೆ. ಅಲ್ಲದೆ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಆರೋಪಿ, ಜನರಿಂದ ಪಡೆದ ಲಕ್ಷಾಂತರ ರೂ. ಹಣದಿಂದಲೇ ತನ್ನ ಸಾಲ ತೀರಿಸಿದ್ದಾನಂತೆ. ಆದರೆ ಚೀಟಿ ಹಣ ಮರಳಿಸಲು ಪುನಃ ಸಾಲ ಸಿಗದಿದ್ದಾಗ ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದೆ.
ಸದ್ಯ ಆರೋಪಿಯ ಮನೆಯನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದು, ಮನೆಯ ಮೇಲೆ ಸಹ ಪುಟ್ಟಸ್ವಾಮಿಗೌಡ ಬ್ಯಾಂಕ್ ಲೋನ್ ಪಡೆದಿದ್ದು ಇನ್ನೂ 80 ಲಕ್ಷ ಸಾಲ ಬಾಕಿಯಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.